283 ಹುದ್ದೆಗೆ ಅರ್ಜಿ ಆಹ್ವಾನ : AIESLನಲ್ಲಿ ಪದವಿ ಪಾಸಾದವರಿಗೆ ಉದ್ಯೋಗಾವಕಾಶ

ಬೆಂಗಳೂರು: ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ (ಎಐಇಎಸ್‌ಎಲ್) ವಿಮಾನ ನಿರ್ವಹಣೆ ಮತ್ತು ದುರಸ್ತಿ ಸಂಸ್ಥೆಯಾಗಿದ್ದು, (ಎಂಆರ್‌ಒ) ಕೇಂದ್ರ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದೆ.

ಪ್ರಸ್ತುತ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ
ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಲ್ಲಿ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಬಿ.ಎಸ್‌ಸಿ, ಬಿ.ಕಾಮ್, ಬಿಎ, ಏರೋನಾಟಿಕಲ್ / ಮೆಕ್ಯಾನಿಕಲ್ / ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್​​​ / ಟೆಲಿಕಮ್ಯುನಿಕೇಷನ್ಸ್ / ಇನ್ಸ್​​​​​​ಟ್ರುಮೆಂಟೇಶನ್ / ಎಲೆಕ್ಟ್ರಾನಿಕ್ಸ್​​​ ಕಮ್ಯುನಿಕೇಶನ್ / ಇಂಡಸ್ಟ್ರಿಯಲ್ / ಪ್ರೊಡಕ್ಷನ್ / ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿಟೆಕ್ ಪದವಿ ಪೂರ್ಣಗೊಳಿಸಿರಬೇಕು.

ಒಟ್ಟು ಹುದ್ದೆಗಳು-283

ಹುದ್ದೆಯ ವಿವರ
ಸಹಾಯಕ ಮೇಲ್ವಿಚಾರಕರು-209
ಗ್ರಾಜುಯೇಟ್ ಇಂಜಿನಿಯರ್ (ಟ್ರೇನಿ)-74

ವಯೋಮಿತಿ
ಸಂಸ್ಥೆಯ ಮಾನದಂಡಗಳಿಗೆ ಅನುಗುಣವಾಗಿ ಹುದ್ದೆಗಳ ಅನುಸಾರ ಕನಿಷ್ಠ 28 – ಗರಿಷ್ಠ 40 ವಯೋಮಾನ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಅನ್ವಯವಾಗಲಿದೆ.

ವೇತನ
ಆಯ್ಕೆಯಾದ ಅಭ್ಯರ್ಥಿಯ ಹುದ್ದೆಗೆ ಅನುಗುಣವಾಗಿ 27,000 ರೂ.ನಿಂದ 79,000 ರೂ. ಮಾಸಿಕ ವೇತನ ಪಾವತಿಸಲಾಗುತ್ತದೆ.

ಅರ್ಜಿ ಶುಲ್ಕ
ಅಧಿಸೂಚನೆಯಲ್ಲಿ ತಿಳಿಸಲಾದ ಬ್ಯಾಂಕ್ ಖಾತೆಗೆ 1,000 ರೂ. ಅರ್ಜಿಶುಲ್ಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ
ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿದ ನಂತರ ಪರೀಕ್ಷೆ ಬರೆಯಲು ಅರ್ಹರಾದ ಅಭ್ಯರ್ಥಿಗಳ ಹೆಸರನ್ನು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಎಂಎಸ್ ವರ್ಡ್, ಎಕ್ಸೆಲ್ ಮತ್ತು ಎಂಎಸ್ ಪವರ್ ಪಾಯಿಂಟ್ ಪರೀಕ್ಷೆ ನಡೆಸಿದ ನಂತರ ಅಂತಿಮ ಆಯ್ಕೆಪಟ್ಟಿ ಪ್ರಕಟಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೇ ದಿನ : 15-1-2024

ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ aiesl.in ವೆಬ್‌ಸೈಟ್‌ನಲ್ಲಿ ನೀಡಲಾದ ಅಧಿಸೂಚನೆಯನ್ನು ಕೂಲಂಕೂಷವಾಗಿ ಪರಿಶೀಲಿಸಿ ಅಲ್ಲಿ ಕೊಡಲಾದ ಅರ್ಜಿ ನಮೂನೆಯನ್ನು ಸಂಪೂರ್ಣ ಭರ್ತಿಮಾಡಿ ಆಫ್​​​​​​​ಲೈನ್ ಅರ್ಜಿ ಸಲ್ಲಿಸಬೇಕು. ಸ್ವಯಂ ದೃಢಿಕೃತ ಅಗತ್ಯ ದಾಖಲೆಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾದ ವಿಳಾಸಕ್ಕೆ ಇಮೇಲ್ ಮಾಡಬೇಕು.