ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ

ಉಡುಪಿ: ಉಡುಪಿ ಕೊಚ್ಚಿನ್​ ಶಿಪ್​ಯಾರ್ಡ್​ ಲಿಮಿಟೆಡ್ ನಲ್ಲಿ ವಿವಿಧ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳು 58

ಹುದ್ದೆಗಳ ವಿವರ

ಸೂಪರ್‌ವೈಸರ್ -18
ಆಫೀಸ್ ಅಸಿಸ್ಟೆಂಟ್, ಬೂತ್ ಆಪರೇಟರ್ಸ್‌- 16
ಅಸಿಸ್ಟೆಂಟ್ ಜನರಲ್ ಮ್ಯಾನೇಜರ್- 02
ಸೀನಿಯರ್ ಮ್ಯಾನೇಜರ್- 01
ಮ್ಯಾನೇಜರ್- 08
ಡೆಪ್ಯೂಟಿ ಮ್ಯಾನೇಜರ್- 01
ಅಸಿಸ್ಟೆಂಟ್ ಮ್ಯಾನೇಜರ್- 12

ವಿದ್ಯಾರ್ಹತೆ

ಮ್ಯಾನ್ಯತೆ ಪಡೆದ ವಿವಿ ಅಥವಾ ಶಿಕ್ಷಣ ಮಂಡಳಿಯಿಂದ ಹುದ್ದೆಗೆ ಅನುಗುಣವಾಗಿ ಎಸ್‌ಎಸ್‌ಎಲ್‌ಸಿ/ಡಿಪ್ಲೊಮಾ/ಐಟಿಐ/ಪದವಿ/ಸ್ನಾತಕೋತ್ತರ ಪದವಿ/ಚಾರ್ಟ್‌ಡ್ ಅಕೌಂಟೆಂಟ್/ಕಾಸ್ಟ್ ಮ್ಯಾನೇಜ್‌ಮೆಂಟ್‌ನಲ್ಲಿ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು. ಹುದ್ದೆಗೆ ಸಂಬಂಧಿತ ವಿಷಯದಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ.

ವಯೋಮಿತಿ ಮತ್ತು ವೇತನ

ಹುದ್ದೆಗೆ ಅನುಗುಣವಾಗಿ ಅಭ್ಯರ್ಥಿಯ ವಯಸ್ಸು ಕನಿಷ್ಠ 30 ರಿಂದ ಗರಿಷ್ಠ 45 ವರ್ಷದೊಳಗಿರಬೇಕು. ಸೂಪರ್‌ವೈಸರ್/ ಬೂತ್ ಆಪರೇಟರ್/ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ 18,000ರೂ.-40,650ರೂ., ಇತರ ಹುದ್ದೆಗಳಿಗೆ 73,280ರೂ.-1,46,560ರೂ. ವೇತನ ನಿಗದಿಯಾಗಿದೆ.

ಸೂಪರ್‌ವೈಸರ್-ಪವರ್ ಪಾಯಿಂಟ್ ಪ್ರೆಸೆಂಟೆಷನ್/ಸಂದರ್ಶನ ಮತ್ತು ಬೂತ್ ಆಪರೇಟರ್/ಆಫೀಸ್ ಅಸಿಸ್ಟೆಂಟ್ ಗೆ-ಲಿಖಿತ ಪರೀಕ್ಷೆ ನಡೆಸಲಾಗುವುದು.

ಹೆಚ್ಚಿನ ಮಾಹಿತಿ ಮತ್ತು ಅರ್ಜಿಗಾಗಿ udupicsl.com ಗೆ ಲಾಗಿನ್ ಆಗಬಹುದು

ಸೂಪರ್‌ವೈಸರ್, ಆಫೀಸ್ ಅಸಿಸ್ಟೆಂಟ್, ಬೂತ್ ಆಪರೇಟರ್ಸ್‌ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಕೊನೆ ದಿನಾಂಕ 10.10.2023
ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ- 08.10.2023