ಎಚ್‌ಎಎಲ್‌ನಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಎಚ್‌ಎಎಲ್‌ನಲ್ಲಿ ಖಾಲಿ ಇರುವ ಸ್ಟಾಪ್‌ ನರ್ಸ್‌, ವೈದ್ಯರು ಹಾಗೂ ಇತರೆ ಹುದ್ದೆಗಳ ನೇಮಕಾತಿಗಾಗಿ ಆರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳ ಸಂಖ್ಯೆ: 11

ವಿದ್ಯಾರ್ಹತೆ: ಮ್ಯಾನತೆ ಪಡೆದ ವಿಶ್ವವಿದ್ಯಾಲಯದಿಂದ ನರ್ಸಿಂಗ್‌, ಬಿಎಸ್‌.ಸಿ ನರ್ಸಿಂಗ್‌ ಹಾಗೂ ಹುದ್ದೆಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಹತೆಯನ್ನು ಹೊಂದಿರಬೇಕು.

ವೇತನ: ಕೇಂದ್ರ ಸರ್ಕಾರದ ಅನುಸಾರ ವೇತನ ನೀಡಲಾಗುವುದು.

ವಯಸ್ಸು: ಕನಿಷ್ಠ–18, ಗರಿಷ್ಠ –35 ವರ್ಷ (ಮೀಸಲಾತಿ ಅನ್ವಯ ಸಡಿಲಿಕೆ ಇರುತ್ತದೆ).

ವಯೋಮಿತಿ:  ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷಗಳು.

ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆಯಲ್ಲಿ ಮೆರಿಟ್‌ ಪಡೆದ ಅಭ್ಯರ್ಥಿಗಳನ್ನು ದಾಖಲೆಗಳ ಪರಿಶೀಲನೆಗೆ ಕರೆಯಲಾಗುವುದು.

ನೇಮಕಾತಿ ಸ್ಥಳ: ಬೆಂಗಳೂರು

ಅರ್ಜಿ ಸಲ್ಲಿಸಲು ಕೊನೆಯ ದಿನ: 14 ಡಿಸೆಂಬರ್‌ 2021

ಅರ್ಜಿ ಸಲ್ಲಿಸುವ ವೆಬ್‌ಸೈಟ್‌:  https://hal-india.co.in