ಉಡುಪಿ ಜುಲೈ 1: ಸ್ಟಾಫ್ ಸೆಲೆಕ್ಷನ್ ಕಮೀಷನ್ ಕೇಂದ್ರ ನೇಮಕಾತಿ ಪ್ರಾಧಿಕಾರವು ಸಬ್ ಇನ್ಸೆಪಕ್ಟರ್ (ಎಸ್.ಐ), ಕೇಂದ್ರ ಮೀಸಲು ಪೋಲಿಸ್ ಪಡೆ((ಸಿ.ಎ.ಪಿ.ಫ್)-2020 ಹುದ್ದೆಗಳಿಗೆ ಕಂಪ್ಯೂಟರ್ ಆನ್ಲೈನ್ ಸ್ಫರ್ದಾತ್ಮಕ ಪರೀಕ್ಷಾ ನೇಮಕಾತಿಯ ಆನ್-ಲೈನ್ ಅರ್ಜಿ ಕರೆಯಲಾಗಿದೆ.
ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅಂದರೆ ಸಾಮಾನ್ಯ ಪದವಿ ಶಿಕ್ಷಣ ಅಥವಾ ತತ್ಸಮಾನ ಪರೀಕ್ಷೆ ಹೊಂದಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಇವುಗಳ ಮೂಲಕ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ http://ssc.nic.in ಪೋರ್ಟಲ್ ನಲ್ಲಿ ಸಲ್ಲಿಸಬಹುದಾಗಿದೆ. ಆನ್ಲೈನ್ ನೊಂದಣಿಯು ಜೂನ್ 17-06-2020 ರಿಂದ ಪ್ರಾರಂಭಗೊAಡಿದ್ದು, ಜುಲೈ 16 ಆನ್ಲೈನ್ ನೊಂದಣಿಯು ಕೊನೆಯ ದಿನವಾಗಿರುತ್ತದೆ.
ಅರ್ಜಿ ಸಲ್ಲಿಸುವ ಮೊದಲು ಜಾಹೀರಾತನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳುವುದು ಇದಲ್ಲದೇ ಅರ್ಜಿ ಸಲ್ಲಿಸಲು ಅಗತ್ಯವಾದ ಮಾರ್ಗದರ್ಶನವನ್ನು ವೆಬ್ಸೈಟ್ನಲ್ಲಿ ತಪ್ಪದೇ ಓದಿ ಕೊಳ್ಳುವುದು ಮತ್ತು ಸಹಾಯವಾಣಿ 080-25502520, 9483862020 ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗಾಧಿಕಾರಿ ಕಛೇರಿಯನ್ನು ಹಾಗೂ ದೂ.ಸಂಖ್ಯೆ 08202574869/9480259790 ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಅವರ ಪ್ರಕಟಣೆ ತಿಳಿಸಿದೆ.