ಉಡುಪಿ: ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ್ ಉಡುಪ ಅವರನ್ನು ಭೇಟಿ ಮಾಡಿ ಉಡುಪಿ ಜಿಲ್ಲೆಯ ಬೆನ್ನುಹುರಿ ಅಪಘಾತಕ್ಕೆ ಒಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರಕ್ಕೆ ಕೊರಂಗ್ರಪಾಡಿಯ ಸರ್ಕಾರಿ ಶಾಲೆಯ ಜಾಗವನ್ನು ಸೇವಾಭಾರತಿ ಸಂಸ್ಥೆಗೆ ಕಲ್ಪಿಸುವಂತೆ ಮನವಿ ಮಾಡಲಾಯಿತು.
ಉಡುಪಿ ಜಿಲ್ಲೆಯಲ್ಲಿರುವ ಒಟ್ಟು 80 ಮಂದಿ ಬೆನ್ನುಹುರಿ ಅಪಘಾತಕ್ಕೆ ಒಳಗಾದ ದಿವ್ಯಾಂಗರ ಮನೆಗೆ 108 ಅಂಬುಲೆನ್ಸ್ ನ ಮೂಲಕ ಆರೋಗ್ಯ ಸ್ಪರ್ಶ ಯೋಜನೆಯಡಿ ಮನೆ ಮನೆಗೆ ಭೇಟಿ ಹಾಗೂ ತಪಾಸಣೆ ಕುರಿತು ಚರ್ಚಿಸಲಾಯಿತು.
ಉಡುಪಿ ಜಿಲ್ಲೆಯಲ್ಲಿರುವ ಟಿಬಿ ರೋಗಸ್ಥರ ಬಗ್ಗೆ ಚರ್ಚಿಸಿ ಅದರಲ್ಲಿ ಉಡುಪಿ ನಗರ ವ್ಯಾಪ್ತಿಯಲ್ಲಿರುವ ಟಿಬಿ ರೋಗಸ್ಥರನ್ನು ದತ್ತು ಸ್ವೀಕಾರ ಮಾಡಿ ನರೇಂದ್ರ ಮೋದಿಯವರ ಆಶಯದಂತೆ ಟಿಬಿ ರೋಗಮುಕ್ತ ಉಡುಪಿ ಮಾಡಲು ತೀರ್ಮಾನಿಸಲಾಯಿತು.
ಕೊಡವೂರು ವಾರ್ಡ್ ನಗರಸಭಾ ಸದಸ್ಯ ಕೆ ವಿಜಯ ಕೊಡವೂರು ಮತ್ತು ಸಾಮಾಜಿಕ ಕಾರ್ಯಕರ್ತರಾದ ರಾಧಾಕೃಷ್ಣ ಮೆಂಡನ್ ಹಾಗೂ ಅಖಿಲೇಶ್. ಎ ಇನ್ನಿತರರು ಉಪಸ್ಥಿತರಿದ್ದರು.


















