ನಿರ್ದೇಶಕ ಮಹೇಶ್ ಬಾಬು ಪಿ ಅವರ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಎಂಬ ಚಿತ್ರಕ್ಕಾಗಿ ನಟಿ ಅನುಷ್ಕಾ ಶೆಟ್ಟಿ ಮತ್ತು ನಟ ನವೀನ್ ಪೋಲಿಶೆಟ್ಟಿ ಜೊತೆಯಾಗಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ಅನ್ನು ಬುಧವಾರ ಅನಾವರಣಗೊಳಿಸಲಾಗಿದ್ದು, ಸಮಕಾಲೀನ ಪ್ರೇಮಕಥೆಯ ಕಥಾಹಂದರದ ತುಣುಕನ್ನು ನೀಡುತ್ತದೆ.
ಪೋಸ್ಟರ್ ಇಬ್ಬರು ವ್ಯಕ್ತಿಗಳ ಕೊಲಾಜ್ ಅನ್ನು ತೋರಿಸುತ್ತಿದ್ದು, ಇಬ್ಬರೂ ತಮ್ಮ ಜೀವನದ ವಿಭಿನ್ನ ಹಂತದಲ್ಲಿದ್ದಾರೆ ಎಂದು ತೋರುತ್ತದೆ. ಅನುಷ್ಕಾ ಲಂಡನ್‌ನಲ್ಲಿ ವಾಸಿಸುತ್ತಿದ್ದು, ‘ಹ್ಯಾಪಿ ಸಿಂಗಲ್’ ಎಂದು ಬರೆದಿರುವ ಪುಸ್ತಕ ಕೈಯಲ್ಲಿದ್ದರೆ, ಹೈದರಾಬಾದ್ ಹುಡುಗನ ಪಾತ್ರದಲ್ಲಿರುವ ನವೀನ್ ಟಿ-ಶರ್ಟಿನಲ್ಲಿ ‘ರೆಡಿ ಟು ಮಿಂಗಲ್’ ಎಂದು ಬರೆದಿದೆ.
ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಬಗ್ಗೆ ನಿರ್ಮಾಣ ಸಂಸ್ಥೆ ಯುವಿ ಕ್ರಿಯೇಷನ್ಸ್ ಪ್ರಕಟಣೆಯನ್ನು ಹೊರಡಿಸಿದೆ. ನಮ್ಮ ಅತ್ಯಂತ ಮೆಚ್ಚಿನ ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಕಾಂಬೊವನ್ನು ಪರಿಚಯಿಸುತ್ತಿದ್ದೇವೆ; ಈ ಬೇಸಿಗೆಯಲ್ಲಿಮನರಂಜನೆಯ ರೋಲರ್‌ಕೋಸ್ಟರ್ ಸವಾರಿಗೆ ಸಿದ್ಧರಾಗಿ ಎಂದಿದೆ.
ಈ ವರ್ಷ ಬೇಸಿಗೆಯಲ್ಲಿ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.