ಕಿರುತೆರೆ ಧಾರಾವಾಹಿ ಜೊತೆಜೊತೆಯಲಿ ಮೂಲಕ ಪ್ರವರ್ಧಮಾನಕ್ಕೆ ಬಂದು ರಾಜ್ಯಾದ್ಯಂತ ಅನುಸಿರಿಮನೆ ಎಂದೇ ಖ್ಯಾತಿ ಪಡೆದಿರುವ ಮೇಘಾ ಶೆಟ್ಟಿಯ ಹಿರಿತೆರೆ ಪ್ರಯಾಣ ಭರಜರಿಯಾಗಿಯೆ ಶುರುವಾಗಿದೆ. ಜೊತೆಜೊತೆಯಲಿ ಧಾರಾವಾಹಿಯ ಮುಗ್ಧ ಮೇಘಾ ಈಗ ಚಂದನವನದ ಬೇಡಿಕೆಯ ನಟಿ.
ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ನಾಯಕ ನಟನಾಗಿರುವ ತ್ರಿಬಲ್ ರೈಡಿಂಗ್ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮೇಘಾ ನಟನೆಯ ದಿಲ್ ಪಸಂದ್ ಚಿತ್ರವೂ ಬಿಡುಗಡೆಯಾಗಿದ್ದು, ಈಗ ತ್ರಿಬಲ್ ರೈಡಿಂಗ್ ಚಿತ್ರ ತೆರೆ ಕಂಡಿದೆ. ಮೇಘಾ ಬಳಿ ಇನ್ನೂ ಎರಡು ಚಿತ್ರಗಳಿವೆ.
ಜಯತೀರ್ಥ ನಿರ್ದೇಶನದ ಥಿಲ್ಲರ್ ಚಿತ್ರ ಕೈವ ಮತ್ತು ರಾಘವೇಂದ್ರ ನಿರ್ದೇಶನದ ಆಫ್ಟರ್ ಆಪರೇಷನ್ ಲಂಡನ್ ಕೆಫೆ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಮೇಘಾ. ಇದರ ಜೊತೆಗೆ ಕಿರುತೆರೆಯ ತಮ್ಮ ಧಾರಾವಾಹಿಯಲ್ಲೂ ವ್ಯಸ್ತರಾಗಿದ್ದಾರೆ. ಹೀಗೆ ಕಿರುತೆರೆ ಹಿರೆತೆರೆ ನಡುವೆ ಡಬಲ್ ರೈಡಿಂಗ್ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.