ಅಂತರರಾಷ್ಟೀಯ ಜೀವವೈವಿಧ್ಯ ದಿನಾಚರಣೆ

ಬೆಂಗಳೂರು : ಕರ್ನಾಟಕ ಜೀವವೈವಿಧ್ಯ ಮಂಡಳಿಯು 2019-20ನೇ ಸಾಲಿನ ಅಂತರರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯನ್ನು ಮೇ:22 ರಂದು ಅರಣ್ಯ ಭವನದಲ್ಲಿ ಸಡಗರದಿಂದ ಆಚರಿಸಿತು. ಈ ವರ್ಷದ ಅಂತರ ರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯ ಘೋಷ ವಾಕ್ಯ “ನಮ್ಮ ಜೀವವೈವಿಧ್ಯತೆ, ನಮ್ಮ ಆಹಾರ, ನಮ್ಮ ಆರೋಗ್ಯ”. ಈ ಕಾರ್ಯಕ್ರಮದ ಕೇಂದ್ರ ಬಿಂದುವಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ  ಸಾಲು ಮರದ ತಿಮ್ಮಕ್ಕ, ಅವರ ಹಾದಿಯಲ್ಲಿ ನಡೆಯುತ್ತಿರುವ ಅವರ ದತ್ತು ಮಗನಾದ ಡಾ.ಉಮೇಶ್ ಬಿ. ಎನ್, ಮುಖ್ಯ ಅತಿಥಿಗಳಾದ  ಮಹೇಂದ್ರ ಜೈನ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ,ಪುನಾಟಿ ಶ್ರೀಧರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಅರಣ್ಯ ಪಡೆ ಮುಖ್ಯಸ್ಥರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಂಡಳಿಯ ಅಧ್ಯಕ್ಷರಾದ  ಎಸ್.ಪಿ ಶೇಷಾದ್ರಿರವರು ಮತ್ತು ಮಂಡಳಿಯ ಸದಸ್ಯ ಕಾರ್ಯದರ್ಶಿಗಳಾದ ಡಾ. ವೀರೇಂದ್ರಸಿಂಗ್‍ರವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಸಭೆಗೆ ಹಾಜರಿದ್ದ ಸರ್ವರನ್ನು ಸದಸ್ಯ ಕಾರ್ಯದರ್ಶಿಗಳು ಸ್ವಾಗತಿಸಿದರು. ಗಣ್ಯರು ಅಂತರರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಯನ್ನು ಜ್ಯೋತಿ ಬೆಳಗುವುದು ಮತ್ತು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಡಾ.ಉಮೇಶ್ ಬಿ.ಎನ್ ರವರು ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರು ತೊಡಗಿಕೊಳ್ಳಬೇಕೆಂದು ತಮ್ಮ ಮನದಾಳದ ಮಾತನ್ನು ತಿಳಿಸಿದರು. ಮುಖ್ಯ ಅತಿಥಿಗಳು ಜೀವವೈವಿಧ್ಯತೆಯ ಕುರಿತು ಮಾತನ್ನಾಡಿದರು.
ಜೀವವೈವಿಧ್ಯತೆ ಸಂರಕ್ಷಣೆ, ಅವುಗಳ ಸುಸ್ಥಿರ ಬಳಕೆ, ಜೈವಿಕ ಸಂಪನ್ಮೂಲಗಳ ಲಾಭ ಮತ್ತು ನ್ಯಾಯ ಸಮ್ಮತ್ತ ಹಂಚಿಕೆ, ಪಾರಂಪರಿಕ ಜ್ಞಾನಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಸನ್ಮಾನಿಸುವ ಸಲುವಾಗಿ ಕರ್ನಾಟಕ ಜೀವವೈವಿಧ್ಯ ಮಂಡಳಿಯು 2019-20ನೇ ಸಾಲಿನಲ್ಲಿ 05 ವಿಭಾಗಗಳಲ್ಲಿ ಜೀವವೈವಿಧ್ಯ ಪ್ರಶಸ್ತಿಯನ್ನು ಪ್ರತಿಷ್ಟಾಪಿಸಿದ್ದು, ಸಾಮಾನ್ಯ ವಿಭಾಗದಲ್ಲಿ ಸಾಲು ಮರದ ನಿಂಗಣ್ಣ-ರಾಮನಗರ ಜಿಲ್ಲೆ, ಕೂಟಗಲ್ ಹೋಬಳಿ, ಅರೆಹಳ್ಳಿ ಗ್ರಾಮ. ಜೀವವೈವಿಧ್ಯತೆ ಮಹಿಳಾ ಪ್ರಶಸ್ತಿ ವಿಭಾಗದಲ್ಲಿ ಕಾನನ ಕೃಷಿಕ ಮಹಿಳೆಯರ ಸಂಘ-ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕು, ಮಾಲಂಗಿ ಪಂಚಾಯತಿ, ಕೃಷಿ ಜೀವವೈವಿಧ್ಯತೆ ವಿಭಾಗದಲ್ಲಿ ಸಹಜ ಸಮೃದ್ಧ ಸಂಸ್ಥೆಯು ಈ ಪ್ರಶಸ್ತಿಗೆ ಭಾಜನವಾಯಿತು. ಜೀವವೈವಿಧ್ಯತೆ ಮತ್ತು ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಲುಮರದ ತಿಮ್ಮಕ್ಕನವರಿಗೆ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯತು. ಈ ಎಲ್ಲಾ ಸಾಧಕರಿಗೂ ಮಂಡಳಿಯ ವತಿಯಿಂದ ವಿಶೇಷ ಸನ್ಮಾನದೊಂದಿಗೆ ರೂ. 25000/- ಗಳ ಪ್ರೋತ್ಸಾಹ ಧನವನ್ನು ನೀಡಲಾಯಿತು.
ಅದೇ ರೀತಿ ಘೋಷವಾಕ್ಯದ ಕುರಿತು 07 ರಿಂದ 10ನೇ ತರಗತಿ ಮಕ್ಕಳಿಗೆ ಚಿತ್ರಕಲಾ ಸ್ಪರ್ದೆಯನ್ನು, ಸಾರ್ವಜನಿಕರಿಗೆ ಛಾಯಾಚಿತ್ರ ಸ್ಪರ್ದೆ, ಕನ್ನಡ ಹಾಗೂ ಆಂಗ್ಲ ಪ್ರಬಂಧ ಸ್ಪರ್ದೆಯನ್ನು ಆಯೋಜಿಸಲಾಗಿ ವಿಜೇತರಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಾಗೂ ಮಂಡಳಿಯ ಅಧ್ಯಕ್ಷರಾದ ಎಸ್.ಪಿ ಶೇಷಾದ್ರಿರವರು ಜೀವವೈವಿಧ್ಯತೆಯ ಕುರಿತು ಅಧ್ಯಕ್ಷ ಭಾಷಣ ಮಾಡಿದರು. ಪರಿಸರ ಗೀತೆಯನ್ನು ಹಾಡುವುದರ ಮೂಲಕ ಐಶ್ವರ್ಯ, ವಿಜಯಲಕ್ಷ್ಮೀ, ಫರಿನ್ ಮತ್ತು ಪ್ರಸನ್ನ ರವರು ಸಭಿಕರ ಮನವನ್ನು ಸೆಳೆದರು. ಈ ಕಾರ್ಯಕ್ರಮದ ನಿರೂಪಣೆ ಐಶ್ವರ್ಯ ನಿರ್ವಹಿಸಿದರು ,ಕೊನೆಯದಾಗಿ ವೀಣಾ ರವರು ವಂದರ್ನಾಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

ಸಸ್ಯ ರಾಶಿಯನ್ನು ಬೆಳೆಸೋಣ……
ಸಸ್ಯ ಕಾಶಿಯನ್ನು ಉಳಿಸೋಣ….
ಜನರಲ್ಲಿ ಜಾಗೃತಿ ಮೂಡಿಸೋಣ….
ಜೀವವೈವಿಧ್ಯತೆಯನ್ನು ಸಂರಕ್ಷಿಸೋಣ
ಉತ್ತಮ ಆಹಾರ ಸೇವಿಸೋಣ…..
ಆರೋಗ್ಯವಂತರಾಗಿ ಬಾಳೋಣ……

ಐಶ್ವರ್ಯ ಸಾಗರ್
ಬಾಳೆಹೊನ್ನೂರು