ಕುಂದಾಪುರ: ಉಡುಪಿಯಲ್ಲಿ ಮತ್ತೊಂದು ಕೊರಗಜ್ಜನ ಪವಾಡ ಬೆಳಕಿಗೆ ಬಂದಿದೆ. ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಪವಾಡಗಳ ಹಿನ್ನೆಲೆಯಲ್ಲಿ ಆಗಾಗ ಅಚ್ಚರಿಯ ಘಟನೆಗಳು ನಡೆಯುತ್ತಲೇ ಇರುತ್ತವೆ.
ಉಡುಪಿಯ ಕುಂದಾಪುರ ಬೇಳೂರು ಕೇದೂರು ಸಮೀಪದ ದಬ್ಬೆಕಟ್ಟೆಯಲ್ಲಿ 3 ಗಂಟೆ ರಾತ್ರಿಗೆ ಇದೇ ದಾರಿಯಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ವಿಶ್ವ ಎನ್ನುವವರು ಮಗುವನ್ನು ನೋಡಿ ಕಾರು ನಿಲ್ಲಿಸಿದ್ದರು. ನಿನ್ನೆ ರಾತ್ರಿ 3 ಗಂಟೆಗೆ ಅಚ್ಚರಿಯ ಘಟನೆಯೊಂದು ನಡೆದಿದ್ದು, ಮನೆಯೊಂದರಲ್ಲಿ ಮಲಗಿದ್ದ ಹೆಣ್ಣು ಮಗುವೊಂದು ಮನೆಯಿಂದ ಸುಮಾರು ಮೂರು ಕಿಲೋಮೀಟರ್ ದೂರ ನಿದ್ದೆ ಕಣ್ಣಿನಿಂದ ರಸ್ತೆಯಲ್ಲಿ ನಡೆದುಕೊಂಡು ಬಂದು ಮುಂದೆ ಹೋಗಲಾಗದೇ ಕೊರಗಜ್ಜ ದೈವಸ್ಥಾನ ನಾಮಫಲಕದ ನಿಂತಿದೆ. ಉಡುಪಿ ಜಿಲ್ಲೆಯ ಕುಂದಾಪುರದ ಬೇಳೂರು ಕೇದೂರಿನಲ್ಲಿ ಇರುವ ಕೊರಗಜ್ಜ ಕ್ಷೇತ್ರ ಕಾರಣಿಕದ ಕ್ಷೇತ್ರವಾಗಿದ್ದು, ಭಕ್ತರ ಇಷ್ಟಾರ್ಥ ಸಿದ್ಧಿಯಾಗಿರುವ ಹಲವು ಉದಾಹರಣೆಗಳಿವೆ. ಈ ಮಗುವನ್ನೂ ಕೂಡ ಕೊರಗಜ್ಜನೇ ರಕ್ಷಣೆ ಮಾಡಿದ್ದಾನೆ ಎಂದು ಭಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ಬಳಿಕ ಮಗುವನ್ನು ಮಾತಾಡಿಸಿದಾಗ ನಿದ್ದೆ ಕಣ್ಣಿನಿಂದ ನಡೆದುಕೊಂಡು ಬಂದ ವಿಷಯ ಬೆಳಕಿಗೆ ಬಂದಿದೆ.ಬಳಿಕ ಮಗುವನ್ನು ಮರಳಿ ಮನೆಗೆ ಹೋಗಿ ಬಿಟ್ಟು ವಿಶ್ವ ಅವರು ಮಾನವೀಯತೆ ಮೆರೆದಿದ್ದು, ಕೊರಗಜ್ಜ ಪವಾಡದಿಂದಲೇ ಮಗು ಪಾರಾಗಿ ಬಂದಿದೆ ಎಂದು ಭಕ್ತರು ನಂಬಿದ್ದಾರೆ.