ರಾಜಸ್ಥಾನ ರಾಯಲ್ಸ್ ಗೆ ಮತ್ತೊಂದು ಆಘಾತ: ಪ್ರಮುಖ ಆಲ್ ರೌಂಡರ್ ಟೂರ್ನಿಯಿಂದ ಹೊರಕ್ಕೆ

ಮುಂಬೈ: ಐಪಿಎಲ್ ಟೂರ್ನಿಯ ಆರಂಭದಲ್ಲಿಯೇ ಪ್ರಮುಖ ವೇಗಿ ಜೋಫ್ರಾ ಆರ್ಚರ್ ಅಲಭ್ಯತೆಯಿಂದ ಸಂಕಷ್ಟಕ್ಕೊಳಗಾಗಿದ್ದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಇದೀಗ ಮತ್ತೊಂದು ಹೊಡೆತ ಬಿದ್ದಿದೆ.

ಪ್ರಮುಖ ಆಲ್ ರೌಂಡರ್, ಆರಂಭಿಕ ಬ್ಯಾಟ್ಸಮನ್ ಬೆನ್ ಸ್ಟೋಕ್ಸ್ ಸಂಪೂರ್ಣ ಟೂರ್ನಿಯಿಂದಲೇ ಹೊರಬಿದ್ದಿದ್ದು, ತಂಡಕ್ಕೆ ಹೊಸ ತಲೆನೋವಾಗಿದೆ.

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಸ್ಟೋಕ್ಸ್ ಗಾಯಗೊಂಡಿದ್ದರು. ಕ್ರಿಸ್ ಗೇಲ್ ಬಾರಿಸಿದ ಚೆಂಡನ್ನು ಕ್ಯಾಚ್ ಮಾಡುವ ವೇಳೆ ಸ್ಟೋಕ್ಸ್ ಬೆರಳಿಗೆ ಗಾಯವಾಗಿತ್ತು. ಎಡಗೈ ಯ ತೋರು ಬೆರಳು ಮುರಿತವಾಗಿದೆ. ಇದರಿಂದ ನಾಲ್ಕೈದು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.

ಇದಾಗ್ಯೂ ಬೆನ್ ಸ್ಟೋಕ್ಸ್ ರಾಜಸ್ಥಾನ ತಂಡದೊಂದಿಗೆ ಸಂಪೂರ್ಣ ಕೂಟದಲ್ಲಿ ಇರಲಿದ್ದಾರೆ. ಅವರ ಮಾರ್ಗದರ್ಶನ ತಂಡಕ್ಕೆ ಅಗತ್ಯ ಎಂಬ ಕಾರಣಕ್ಕೆ ಫ್ರಾಂಚೈಸಿ ಈ ನಿರ್ಧಾರಕ್ಕೆ ಬಂದಿದೆ.