ಬೆಂಗಳೂರು: ತೌಕ್ತೆ ಚಂಡಮಾರುತದ ಬೆನ್ನಲ್ಲೇ ಇದೀಗ ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಮತ್ತೊಂದು ಚಂಡಮಾರುತ ಅಪ್ಪಳಿಸುವ ಆತಂಕ ಎದುರಾಗಿದೆ.
ಹೌದು, ಮೇ 23ರಂದು ಬಂಗಾಳಕೊಲ್ಲಿಯಲ್ಲಿ ಈ ಚಂಡಮಾರುತ ಸೃಷ್ಟಿಯಾಗಲಿದ್ದು, ಇದಕ್ಕೆ “ಯಾಸ್” ಎಂದು ಹೆಸರಿಡಲು ನಿರ್ಧರಿಸಲಾಗಿದೆ. ಹಾಗೆ, ಇದು ಐದು ದಿನಗಳ ಕಾಲ ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿದ್ದ ತೌಕ್ತೆ ಚಂಡಮಾರುತ ಕರ್ನಾಟಕ ಕರಾವಳಿ ಭಾಗ ಸಹಿತ ಹಲವು ರಾಜ್ಯಗಳಲ್ಲಿ ಅಪಾರ ಹಾನಿ ಉಂಟುಮಾಡಿತ್ತು.
ಹವಾಮಾನ ಇಲಾಖೆಯ ವರದಿ ಪ್ರಕಾರ ಮುಂದಿನ ವಾರದಲ್ಲಿ ಬಂಗಾಳ ಕೊಲ್ಲಿ ಪ್ರದೇಶದಲ್ಲಿ ಮಾಸ್ ಚಂಡಮಾರುತ ಕಡಿಮೆ ಪ್ರಮಾಣದ ಒತ್ತಡದಲ್ಲಿ ಕಾಣಿಸಿಕೊಳ್ಳಲಿದ್ದು, ನಂತರ ಇದು ತೀವ್ರತೆ ಪಡೆದುಕೊಳ್ಳಲಿದೆ ಎಂದು ಹವಾಮಾನ ಇಲಾಖೆಯ ಪ್ರಭಾರ ಅಧಿಕಾರಿ ಸುನೀತಾ ದೇವಿ ತಿಳಿಸಿದ್ದಾರೆ.