ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿಗಳು ಗಂಡು ಚೀತಾ ಸೂರಜ್ ಸಾವನ್ನಪ್ಪಿರುವುದು ಪತ್ತೆ ಮಾಡಿದ್ದಾರೆ. ಸದ್ಯ ಗಂಡು ಚೀತಾ ಸೂರಜ್‌ನ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಆ ಬಳಿಕವಷ್ಟೇ ಚೀತಾ ಸಾವಿಗೆ ಕಾರಣವೇನು ಎಂಬುದು ಬಹಿರಂಗವಾಗಲಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚೀತಾಗಳ ಸುರಕ್ಷತೆಯ ಬಗ್ಗೆ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ. ಇದರ ಮಧ್ಯೆ ಮತ್ತೊಂದು ಕಹಿ ಸುದ್ದಿ ಹೊರ ಬಂದಿದೆ. ಗ್ವಾಲಿಯರ್, ಮಧ್ಯಪ್ರದೇಶ: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳ ಸಾವಿನಿಂದಾಗಿ ಸರ್ಕಾರವು ಸಂಕಷ್ಷಕ್ಕೆ ಸಿಲುಕಿಕೊಂಡಿದೆ.ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಚೀತಾಗಳ ಸಾವಿನ ಪ್ರಕ್ರಿಯೆ ನಿಲ್ಲುವಂತೆ ಕಾಣುತ್ತಿಲ್ಲ. ಇಂದು ಮತ್ತೊಂದು ಚೀತಾ ಸಾವನ್ನಪ್ಪಿರುವ ಸಂಗತಿ ಕೇಳಿ ಬಂದಿದೆ.
ಈವರೆಗೆ 8 ಚೀತಾ ಸಾವು: ಕೆಲ ದಿನಗಳ ಹಿಂದೆ ಕಾಡಿನಲ್ಲಿ ತೇಜಸ್ ಶವವಾಗಿ ಪತ್ತೆಯಾಗಿದ್ದು, ಆ ಚೀತಾ ಕುತ್ತಿಗೆಯಲ್ಲಿ ಗಂಭೀರ ಗಾಯದ ಗುರುತುಗಳು ಕಂಡುಬಂದಿವೆ. ತೇಜಸ್ ಸಾವಿನ ನಂತರ ಮರಣೋತ್ತರ ಪರೀಕ್ಷೆಯ ವರದಿ ಬಂದಾಗ ಘರ್ಷಣೆ ಸಮಯದಲ್ಲಿ ಚೀತಾ ಗಾಯವಾಗಿದೆ ಎಂದು ಹೇಳಲಾಗಿದೆ.
ಸಾವಿಗೆ ಏನು ಕಾರಣ?: ಕುನೋ ಅಭಯಾರಣ್ಯದಲ್ಲಿ ಚೀತಾ ಸಾವನ್ನಪ್ಪಿರುವುದು ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಸಂಚಲನ ಮೂಡಿಸಿದೆ. ಇಲ್ಲಿಯವರೆಗೆ, ಅಭಯಾರಣ್ಯದಲ್ಲಿ ಒಟ್ಟು 5 ವಯಸ್ಕ ಮತ್ತು 3 ಮರಿ ಚೀತಾಗಳು ಸಾವನ್ನಪ್ಪಿವೆ. ಆದರೆ ಇಷ್ಟು ಬೇಗ ಏಕೆ ಈ ಚೀತಾ ಸಾಯುತ್ತಿವೆ ಎಂಬುದಕ್ಕೆ ಇದುವರೆಗೂ ಸತ್ಯ ಬಹಿರಂಗವಾಗಿಲ್ಲ. ಈ ಸಾವುಗಳ ಹಿಂದಿನ ಕಾರಣವೇನು. ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಈ ಬಗ್ಗೆ ಹೇಳಲು ನಿರಾಕರಿಸುತ್ತಿದ್ದಾರೆ. ಪ್ರತಿ ಬಾರಿಯೂ ಆಡಳಿತ ಮಂಡಳಿ ನಿರ್ಲಕ್ಷ್ಯದ ಆರೋಪ ಕೇಳಿ ಬಂದರೂ ನಿರ್ಲಕ್ಷಿಸಲಾಗುತ್ತಿದೆ. ತೇಜಸ್ ಇತ್ತೀಚೆಗೆ ಜುಲೈ 11 ರಂದು ನಿಧನವಾಯಿತು.
ಸಭೆಯಲ್ಲಿ ಮತ್ತೊಂದು ಚೀತಾ ಮತ್ತು ತೇಜಸ್ ನಡುವೆ ಘರ್ಷಣೆ ಸಂಭವಿಸಿದೆ ಎಂದು ವೈದ್ಯರು ಹೇಳಿದ್ದರು. ಇದರಿಂದ ತೇಜಸ್ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಕುನೋದಲ್ಲಿ ನಿರಂತರ ಚೀತಾಗಳ ಮಾರಣಹೋಮಕ್ಕೆ ರಾಜ್ಯ ಸರಕಾರದಿಂದ ಹಿಡಿದು ಅರಣ್ಯ ಇಲಾಖೆವರೆಗಿನ ಹಿರಿಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇಲ್ಲಿಯವರೆಗೆ ಒಟ್ಟು 8 ಚೀತಾಗಳು ಕುನೋದಲ್ಲಿ ಸಾವನ್ನಪ್ಪಿವೆ
ಜುಲೈ 11 ರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಕುನೋ ಪಾರ್ಕ್ ನಿರ್ವಹಣೆಯ ಮೇಲ್ವಿಚಾರಣೆ ಸಮಯದಲ್ಲಿ ತೇಜಸ್ ಗಾಯಗೊಂಡ ಸ್ಥಿತಿಯಲ್ಲಿ ಕಂಡುಬಂದಿತ್ತು. ಗಮನಿಸಿದ ಮೇಲ್ವಿಚಾರಣಾ ತಂಡವು ಕೂಡಲೇ ಪಾಲ್ಪುರ್ ಪ್ರಧಾನ ಕಚೇರಿಯಲ್ಲಿರುವ ಪಶುವೈದ್ಯರಿಗೆ ಮಾಹಿತಿ ರವಾನಿಸಿದ್ದರು. ವೈದ್ಯರು ಸ್ಥಳಕ್ಕೆ ತೆರಳಿ ಚೀತಾವನ್ನು ಪರೀಕ್ಷಿಸಿದ್ದು ಗಾಯದ ತೀವ್ರತೆ ಗಂಭೀರವಾಗಿರುವುದು ಗೊತ್ತಾಗಿದೆ. ಬಳಿಕ ಅರಿವಳಿಕೆ ನೀಡಿ ಚಿಕಿತ್ಸೆಗೆ ಕಳುಹಿಸಲಾಗಿತ್ತು. ಆದರೆ ಅದೇ ದಿನ ಮಧ್ಯಾಹ್ನ ಚೀತಾ ಮೃತಪಟ್ಟಿರುವುದು ಅಧಿಕಾರಿಗಳು ತಿಳಿಸಿದ್ದರು.
ಎರಡ್ಮೂರು ದಿನಗಳ ಹಿಂದೆ ಏಳನೇ ಚೀತಾ ಸಾವು: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಆಫ್ರಿಕನ್ ಚೀತಾ ಸಾವನ್ನಪ್ಪಿದ್ದು, ನಾಲ್ಕು ತಿಂಗಳಲ್ಲಿ ಸಂಭವಿಸಿದ ಏಳನೇ ಸಾವು ಇದಾಗಿತ್ತು. ತೇಜಸ್ ಎಂಬ ಹೆಸರಿನ ನಾಲ್ಕು ವರ್ಷ ವಯಸ್ಸಿನ ಗಂಡು ಚೀತಾವನ್ನು ಕಳೆದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ತಂದು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿತ್ತು. ಇತರ ಚೀತಾಗಳೊಂದಿಗಿನ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರಬಹುದು ಎಂದು ವನ್ಯಜೀವಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಜೆ.ಎಸ್. ಚೌಹಾಣ್ ಶಂಕೆ ವ್ಯಕ್ತಪಡಿಸಿದ್ದರು.