ಕಟಪಾಡಿ: ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪ್ರಥಮ ವರ್ಷದ ಕ್ರೀಡಾಕೂಟವು ಇತ್ತೀಚೆಗೆ ಎಸ್.ವಿ.ಎಸ್ ಕ್ರೀಡಾಂಗಣದಲ್ಲಿ
ನಡೆಯಿತು.
ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಷ್ಟೀಯ ಕ್ರೀಡಾ ಪಟು ಮನೀಶ್ ಲಕ್ಷ್ಮಣ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕ್ರೀಡೆ ಕಲಿಕೆಗೆ ಪೂರಕವೇ ಹೊರತು ಮಾರಕವಲ್ಲ, ಸ್ವಸ್ಥ ಆರೋಗ್ಯಕ್ಕೆ ಕ್ರೀಡೆ ಅತಿ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿಯಾದ ಗಗನ್ ಜಿ ಅವರಿಗೆ ಕಾಲೇಜಿನ ವತಿಯಿಂದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಿ.ಎ ಗೋಪಾಲಕೃಷ್ಣ ಭಟ್ ಅವರು ವಹಿಸಿದ್ದರು.
ಸಿದ್ಧಾಂತ್ ಫೌಂಡೇಶನ್ ನ ಟ್ರಸ್ಟಿ ನಮಿತಾ ಜಿ ಭಟ್ , ತ್ರಿಶಾ ವಿದ್ಯಾ ಪಿಯು ಕಾಲೇಜಿನ ಪ್ರಾಂಶುಪಾಲ ಡಾ. ಅನಂತ್ ಪೈ ಉಪಸ್ಥಿತರಿದ್ದರು.
ಉಪನ್ಯಾಸಕರಾದ ವರ್ಷ ಪ್ರಭು ಮತ್ತು ಚಂದನ್ ನಿರೂಪಿಸಿ, ಕ್ರೀಡಾ ಕಾರ್ಯದರ್ಶಿ ಆಲ್ಡ್ರಿನ್ ಮಾರ್ಟಿಸ್ ಹಾಗೂ
ಕ್ರೀಡಾ ನಿರ್ದೇಶಕ ಶಶಿಕಿರಣ್ ವಂದಿಸಿದರು.