ಬನ್ನಂಜೆ ಶನಿಕ್ಷೇತ್ರದಲ್ಲಿ ಶನೈಶ್ಚರ ಜಯಂತಿ ಹಾಗೂ ವಾರ್ಷಿಕ ಶನೈಶ್ವರ ಉತ್ಸವ ಸಂಪನ್ನ

ಉಡುಪಿ: ಬನ್ನಂಜೆ ಗರಡಿ ರಸ್ತೆಯಲ್ಲಿರುವ 23 ಅಡಿ ಎತ್ತರದ ಕರ್ನಾಟಕದ ಅತೀ ದೊಡ್ಡ ಶನಿ ದೇವರ ಏಕಶಿಲಾ ಮೂರ್ತಿ ಸನ್ನಿಧಾನದಲ್ಲಿ ಶುಕ್ರವಾರದಂದು ಶನೈಶ್ಚರ ಜಯಂತಿ ಹಾಗೂ ವಾರ್ಷಿಕ ಶನೈಶ್ವರ ಉತ್ಸವವು ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀಪಾದರ ದಿವ್ಯ ಮಾರ್ಗದರ್ಶನದಲ್ಲಿ ನಡೆಯಿತು.

ಬೆಳ್ಳಿಗೆ 7.30 ಕ್ಕೆ ಸಾಮೂಹಿಕ ಪ್ರಾರ್ಥನೆ, ರಾಮ ವಿಠ್ಠಲ್ ಹಾಗೂ ಶನೈಶ್ಚರ ಸ್ವಾಮಿಯ ಸನ್ನಿಧಿಯಲ್ಲಿ ಸಗ್ರಹ ಮಖ, ಶನಿಶಾಂತಿ, ಪುರಸ್ಪರ ಜಯ ಸೂಕ್ತ ಯಾಗದ ಧಾರ್ಮಿಕ ಪೂಜಾ ವಿಧಾನಗಳನ್ನು ಕೊರಂಗ್ರಪಾಡಿ ಕುಮಾರ ಗುರು ತಂತ್ರಿ ನೇತೃತ್ವದಲ್ಲಿ ಅರ್ಚಕ ವೃಂದದವರು ನೆಡೆಸಿಕೊಟ್ಟರು. ಶ್ರೀ ದೇವರ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ, ಯಾಗದ ಪೂರ್ಣಾಹುತಿ, ಪಲ್ಲಪೂಜೆ, ಮಂಡಲಪೂಜೆ, ಉತ್ಸವ ಬಲಿ ಪೂಜೆ ಜರಗಿತು. ಭಕ್ತಾದಿಗಳಿಂದ ಶನಿ ದೇವರಿಗೆ ತೈಲಾಭಿಷೇಕ, ಎಳ್ಳು ದೀಪ ಆರತಿ ನಡೆಯಿತು ಸಾಮೂಹಿಕ ಶನಿ ಶಾಂತಿ ಯಾಗ ಹಾಗೂ ಸಾರ್ವ ಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಸಮಾರಂಭದಲ್ಲಿ ಸತ್ಯನಾರಾಯಣ ಆಚಾರ್ಯ, ಶ್ರೀಮತಿ ಜಯಲಕ್ಷ್ಮೀ ಆಚಾರ್ಯ, ಪ್ರಹ್ಲಾದ ಆಚಾರ್ಯ, ಯತೀಶ್ ಆಚಾರ್ಯ, ಶ್ರೀಪಾದ ಆಚಾರ್ಯ, ಪೂಜಾ ಆಚಾರ್ಯ, ಪ್ರತೀಕ ಆಚಾರ್ಯ ಉಪಸ್ಥಿತರಿದ್ದರು.