ಭುವನೇಶ್ವರ: ಜಗನ್ನಾಥ ರಥ ಯಾತ್ರೆ ಎಂದೂ ಕರೆಯಲ್ಪಡುವ ಪುರಿ ರಥ ಯಾತ್ರೆಯು ಒಡಿಶಾದ ಪುರಿಯಲ್ಲಿ ನಡೆಯುವ ವಾರ್ಷಿಕ ಉತ್ಸವವಾಗಿದೆ. ಇದು ಮಹತ್ವದ ಹಿಂದೂ ಹಬ್ಬವಾಗಿದ್ದು, ಜಗನ್ನಾಥನಾದ ಕೃಷ್ಣ, ಬಲರಾಮ ಮತ್ತು ಸುಭದ್ರೆಯರನ್ನು ಬೃಹತ್ ಶೋಭಾಯಮಾನ ರಥಗಳಲ್ಲಿ ಕುಳ್ಳಿರಿಸಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ.
ಚಾಂದ್ರಮಾನ ಪಂಚಾಗ ಪದ್ದತಿಯನ್ನು ಆಧರಿಸಿ ಪುರು ಜಗನ್ನಾಥನ ರಥ ಯಾತ್ರೆಯ ದಿನವನ್ನು ನಿಗದಿ ಮಾಡಲಾಗುತ್ತದೆ. ಬಹುತೇಕ ರಥಯಾತ್ರೆಯು ಜೂನ್ ಅಥವಾ ಜುಲೈ ತಿಂಗಳಲ್ಲಿ ನಡೆಯುತ್ತದೆ. ಈ ವರ್ಷ ಇದು ಜೂನ್ 20 ರಂದು ನಡೆಯುತ್ತಿದೆ.
ಪುರಿಯ ಪ್ರಸಿದ್ಧ ಜಗನ್ನಾಥ ದೇವಾಲಯದ ಆವರಣದಲ್ಲಿ ರಥಯಾತ್ರೆಯು ನಡೆಯುತ್ತದೆ. ಮೆರವಣಿಗೆಯು ದೇವಸ್ಥಾನದಿಂದ ಪ್ರಾರಂಭವಾಗುತ್ತದೆ ಮತ್ತು ದೇವಸ್ಥಾನಕ್ಕೆ ಹಿಂದಿರುಗುವ ಮೊದಲು ಪುರಿಯ ಬೀದಿಗಳಲ್ಲಿ ಸುತ್ತಾಡುತ್ತದೆ. ಈ ಹಬ್ಬವು ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಭಕ್ತರು ಡಿಡಿ-ಭಾರತಿ, ಡಿಡಿ-ಒಡಿಯಾ ಮತ್ತು ವಿವಿಧ ಟಿವಿ ಚಾನೆಲ್‌ಗಳಲ್ಲಿ ಬೆಳಿಗ್ಗೆ 8 ರಿಂದ ಜಗನ್ನಾಥ ರಥಯಾತ್ರೆಯನ್ನು ನೇರಪ್ರಸಾರದಲ್ಲಿ ವೀಕ್ಷಿಸಬಹುದು.