ಉಡುಪಿ: ಇಲ್ಲಿನ ಮಠದಬೆಟ್ಟು ರಸ್ತೆಯ ನಾಗಬನದ ಎದುರು ಆರ್.ಎಸ್.ಬಿ. ವಿಂಡ್ಸರ್ ನ ಮೊದಲನೆ ಮಹಡಿಯಲ್ಲಿರುವ ಪಂಚಮಿ ಸೌಹಾರ್ದ ಸಹಕಾರಿ ನಿಯಮಿತ ಸಹಕಾರಿ ಸಂಘದ 2021- 22ನೇ ಸಾಲಿನ ವಾರ್ಷಿಕ ಮಹಾ ಸಭೆಯ ಸೂಚನಾ ಪತ್ರ ಹಾಗೂ ವಾರ್ಷಿಕ ಲೆಕ್ಕ ಪತ್ರಗಳ ವರದಿಯನ್ನು ಸೆ. 24 ರಂದು ಕುಂಜಿಬೆಟ್ಟುವಿನ ಸ್ವರ್ಣ ಜುವೆಲ್ಲರಿಯ ಹತ್ತಿರವಿರುವ ಶ್ರೀ ಕೃಷ್ಣ ಪ್ರಜ್ಞ ಪ್ರತಿಷ್ಠಾನದಲ್ಲಿ ಅಪರಾಹ್ನ 3.00 ಗಂಟೆಗೆ ಮಂಡಿಸಲಾಗುವುದು.
ಸಂಘದ ಅಧ್ಯಕ್ಷ ಸತ್ಯಪ್ರಸಾದ್ ಶೆಣೈ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಸಂಘದ ಎಲ್ಲಾ ಸದಸ್ಯರೂ ಸಭೆಯಲ್ಲಿ ಭಾಗವಹಿಸುವಂತೆ ಆಡಳಿತ ಮಂಡಳಿಯ ಪರವಾಗಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ವಾತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.