ಉಡುಪಿ: ಕಿನ್ನಿಮೂಲ್ಕಿ ಕನ್ನರಪಾಡಿ ಬ್ರಾಹ್ಮಣ ಸಭಾದ ವಾರ್ಷಿಕ ಮಹಾಸಭೆ ಇತ್ತೀಚಿಗೆ ಶ್ರೀದೇವಿ ಸಭಾ ಭವನದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ರಮೇಶ ರಾವ್ ಬೀಡು ಹಾಗೂ ವಾಯುಪಡೆಯ ನಿವೃತ್ತ ಸ್ಕ್ವಾಡ್ರನ್ ಲೀಡರ್ ಶಿವರಾಮ ಮಂಜ ಇವರು ಭಾಗವಹಿಸಿದ್ದರು.
ಈ ಬಾರಿಯ ಎಸ್ ಎಸ್ ಎಲ್ ಸಿ , ಮತ್ತು ಪಿ ಯು ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಸಾಧನೆ ಮಾಡಿ, ವಿವಿ ಪ್ರಶಸ್ತಿ ಪಡೆದ ಸಂಘದ ಸದಸ್ಯೆಯರಾದ ಉಷಾ ಚಡಗ ಮತ್ತು ವೀಣಾ ರವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಕೆ. ಸುರೇಶ ರಾವ್, ಕಾರ್ಯದರ್ಶಿಯಾಗಿ ಕೆ. ವಿ ಆಚಾರ್ಯ, ಖಜಾಂಚಿ ಎಮ್ ಎನ್ ರಾಜೇಂದ್ರ ಭಟ್ ಪುನರ್ ಆಯ್ಕೆಗೊಂಡರು.
ಸಂಘದ ಸದಸ್ಯರ ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.