ಉಡುಪಿ ಜಿಲ್ಲಾ ಕುಡಾಲ್ ದೇಶಸ್ತ ಆದ್ಯ ಗೌಡ ಬ್ರಾಹ್ಮಣ ಸಂಘದ ವಾರ್ಷಿಕ ಮಹಾಸಭೆ

ಉಡುಪಿ: ಉಡುಪಿ ಜಿಲ್ಲಾ ಕುಡಾಲ್ ದೇಶಸ್ತ ಆದ್ಯ ಗೌಡ ಬ್ರಾಹ್ಮಣ ಸಂಘದ ವಾರ್ಷಿಕ ಮಹಾಸಭೆಯು ಸೆ.10 ರಂದು ರಾಧಾಕೃಷ್ಣ ಸಾಮಂತ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿದ ಸಾಮಂತ್, ಇಂತಹ ಕಾರ್ಯಕ್ರಮದ ಮೂಲಕ ಸದಸ್ಯರು ಸೇರಿಕೊಳ್ಳುವ ಅಗತ್ಯವನ್ನು ವಿವರಿಸಿ ಎಲ್ಲಾ ಕಾರ್ಯಕ್ರಮಗಳಿಗೆ ಸದಸ್ಯರಿಂದ ಇನ್ನೂ ಹೆಚ್ಚಿನ ಸಹಕಾರವನ್ನು ಕೋರಿದರು.

ಈ ಸಂದರ್ಭದಲ್ಲಿ ಮಹೇಶ್ ಠಾಕೂರ್, ಭರತ್ ಪ್ರಭು, ಹಾಗೂ ಮನೋಜ್ ಪ್ರಭು ಇವರು ನೀಡಿದ ಆರ್ಥಿಕ ಸಹಾಯವನ್ನು ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಾಗಿ ವಿತರಿಸಲಾಯಿತು.

ವೇದಿಕೆಯಲ್ಲಿ ಸ್ಥಾಪಕ ಅಧ್ಯಕ್ಷ ಭರತ್ ಪ್ರಭು, ಶ್ರೀ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದಿನೇಶ್ ಪ್ರಭು, ಪದಾಧಿಕಾರಿಗಳಾದ ಮಾಧುರಿ ವಿ ಪಾಟೀಲ್, ಚಂದ್ರಪ್ರಭ ಪ್ರಭು ಉಪಸ್ಥಿತರಿದ್ದರು.

ಸಂಘದ ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ರಮಾನಂದ ಸಾಮಂತ್, ಲೆಕ್ಕಪತ್ರಗಳನ್ನು ದೇವರಾಜ್ ಪ್ರಭು ಮಂಡಿಸಿದರು. ಮಹಿಳಾ ಘಟಕದ ಕಾರ್ಯದರ್ಶಿ ಆಶಾ ಪಾಟೀಲ್ ವಂದಿಸಿದರು.