ಪಂಚಮಿ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಶೇ.7% ಡಿವಿಡೆಂ ಡ್ ಘೋಷಣೆ

ಉಡುಪಿ: ಪಂಚಮಿ ಸೌಹಾರ್ದ ಸಹಕಾರಿ ಉಡುಪಿ ಇದರ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಕುಂಜಿಬೆಟ್ಟು ಶ್ರೀ ಕೃಷ್ಣ ಪ್ರಜ್ಞಾ ಪ್ರತಿಷ್ಠಾನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸತ್ಯ ಪ್ರಸಾದ್ ಶಣೈ ಮಾತನಾಡಿ, 35 ಕೋ.ರೂ. ವ್ಯವಹಾರ ನಡೆಸಿದ ಸಂಘವು 10,75,747 ರೂ. ನಿವ್ವಳ ಲಾಭ ಗಳಿಸಿ, ಶೇ.7% ಪಾಲು ಮುನಾಫೆ ಘೋಷಿಸಿದೆ ಎಂದರು.

ಸಂಸ್ಥೆಯು ಸುಸಜ್ಜಿತ ಹವಾನಿಯಂತ್ರಿತ ಕೊಠಡಿ ಹೊಂದಿದ್ದು ಈಗಾಗಲೇ RTGS & NEFT ಸೌಲಭ್ಯ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ವ್ಯವಹಾರಕ್ಕೆ ಸಂಬಂಧ ಪಟ್ಟ ಸಂದೇಶ (SMS) ವನ್ನು ನೀಡಲಾಗುವುದು ಎಂದು ಹೇಳಿ ನಮ್ಮ ಸಂಸ್ಥೆಯು ಸಾಮಾಜಿಕ ಬದ್ಧತೆಯನ್ನು ಹೊಂದಿ ಶಿಕ್ಷಣಕ್ಕೆ ಸಂಬಂಧಪಟ್ಟ ಪ್ರೋತ್ಸಾಹ ಧನ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ಸಹಾಯಧನವನ್ನು ಈಗಾಗಲೇ ನೀಡುತ್ತಿದ್ದು ಮುಂದಿನ ವರ್ಷದಿಂದ ಸಂಘದ ಸದಸ್ಯರ ಮಕ್ಕಳಿಗೆ 85% ಕ್ಕಿಂತ ಮೇಲೆ ಅಂಕ ಗಳಿಸಿದ ಪಿಯುಸಿ ಹಾಗೂ ಹತ್ತನೇ ತರಗತಿಯಲ್ಲಿ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಕೂಡ ಘೋಷಿಸಿದೆ ಎಂದರು.

ಉಪಾಧ್ಯಕ್ಷ ಹರೀಶ್ ಪ್ರಭು, ನಿರ್ದೇಶಕ ಸಂಜೀವ ಪ್ರಭು, ರಾಘವೇಂದ್ರ ನಾಯಕ್, ಕಾರ್ತಿಕ್ ಪ್ರಭು, ನವ್ಯಾ ಸಿ.ಪ್ರಭು, ಶಿವಪ್ರಸಾದ್, ರವೀಂದ್ರ ಕೇಳ್ಕರ್, ವಿಜಯ ಶೆಣೈ, ಸಂದೇಶ್ ಕಾಮತ್ ಉಪಸ್ಥಿತರಿದ್ದರು.

ನಿರ್ದೇಶಕ ಸುರೇಂದ್ರ ನಾಯಕ್ ಸ್ವಾಗತಿಸಿ, ಸಿಇಓ ಸ್ವಾತಿ ಪ್ರಭು ಹಣಕಾಸಿನ ಆಯವ್ಯಯ ಮಂಡಿಸಿದರು. ನಿರ್ದೇಶಕ ಪ್ರೀತಿ ಶೆಣೈ ವರದಿ ವಾಚಿಸಿ, ರಾಘವೇಂದ್ರ ನಾಯಕ್ ವಂದಿಸಿದರು.