ಬ್ರಹ್ಮಾವರ: ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ. ಬ್ರಹ್ಮಾವರ ಇದರ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಶ್ರೀ ನಾರಾಯಣ ಗುರು ಸಭಾ ಭವನ ಬ್ರಹ್ಮಾವರದಲ್ಲಿ ಸಂಘದ ಅಧ್ಯಕ್ಷ ಶಂಕರ ಪೂಜಾರಿ ಕುಕ್ಕುಡೆ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಂಘದ ಅಧ್ಯಕ್ಷ ಶಂಕರ ಪೂಜಾರಿ ಕುಕ್ಕುಡೆ ವರದಿ ಮಂಡಿಸಿ, ಸಂಘವು 27.05 ಕೋಟಿ ಠೇವಣಿಯನ್ನು ಸ್ವೀಕರಿಸಿ, 26.77 ಕೋಟಿ ಸಾಲ ವಿತರಿಸಿ, 46.66 ಲಕ್ಷ ಲಾಭವನ್ನು ಗಳಿಸಿದೆ. ಸಂಘವು ಪ್ರಸ್ತುತ 2022-23 ನೇ ಸಾಲಿನಲ್ಲಿ 33 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, 150 ಕೋಟಿ ವ್ಯವಹಾರ ನಡೆಸಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಎನ್ ಕರ್ಕೇರಾ ಲೆಕ್ಕ ಪತ್ರಗಳ ಮಂಡನೆಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಸಂಘವು ಲಾಭಾಂಶದಲ್ಲಿ ಸದಸ್ಯರ ಸಹಾಯಕ ನಿಧಿ ಹಾಗೂ ವಿದ್ಯಾನಿಧಿಯ ಮೂಲಕ 185 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ 60% ಅಂಕ ಪಡೆದ ಹೈಸ್ಕೂಲಿನಿಂದ ವೃತ್ತಿ ಶಿಕ್ಷಣದವೆರೆಗಿನ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘಕ್ಕೆ ನೆರವಿತ್ತ ಆಯ್ದ ಗ್ರಾಹಕರನ್ನು ಸಂಘದ ಪರವಾಗಿ ಗೌರವಿಸಲಾಯಿತು.
ಉಪಾಧ್ಯಕ್ಷ ವಿಠಲ ಪೂಜಾರಿ ಹೆರಂಜೆ, ನಿರ್ದೇಶಕ ಅಚ್ಚುತ ಕೋಟ್ಯಾನ್ ಹೇರೂರು, ಕೃಷ್ಣ ಪೂಜಾರಿ ಅಮ್ಮುಂಜೆ, ಉಮೇಶ್ ಪೂಜಾರಿ ಬೆಳ್ಮಾರು, ನಾರಾಯಣ ಪೂಜಾರಿ ಉಗ್ಗೆಲ್‌ಬೆಟ್ಟು, ಉಪಸ್ಥಿತರಿದ್ದರು.
ಸಂಘದ ನಿರ್ದೇಶಕ ವಿಠಲ ಪೂಜಾರಿ ಮಟಪಾಡಿ ಸ್ವಾಗತಿಸಿದರು, ನಿರ್ದೇಶಕ ಸತೀಶ್ ಪೂಜಾರಿ ಉಗ್ಗೆಲ್‌ಬೆಟ್ಟು ವಂದಿಸಿದರು.