ಉಪ್ಪುಂದ: ಮತ್ಸಸಂಜೀವಿನಿ ಮೀನುಗಾರರ ಉತ್ಪಾದಕರ ಕಂಪನಿಯ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಮತ್ತುಷೇರು ಪ್ರಮಾಣ ಪತ್ರ ವಿತರಣೆಯು ನಾಡದೋಣಿ ಭವನ ಉಪ್ಪುಂದಲ್ಲಿ ಇಲ್ಲಿ ನಡೆಯಿತು.
SCDCC ಬ್ಯಾಂಕ್ ಮ್ಯಾನೇಜರ್ ಶಂಕರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶೇರು ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಕಂಪನಿಯನ್ನು ಗ್ರಾಮೀಣ ಭಾಗದ ರೈತರಿಗೆ ಮತ್ತು ಮೀನುಗಾರರಿಗೆ ಉತ್ತಮವಾದ ಆದಾಯಬರುವ ರೀತಿಯಲ್ಲಿ ಉಪ್ಪುಂದದಲ್ಲಿ ಸ್ಥಾಪಿಸಲಾಗಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಉಪ್ಪುಂದ ಸಂಸ್ಥೆ ಅಧ್ಯಕ್ಷ ಎ. ಆನಂದ ಖಾರ್ವಿ ಮಾತನಾಡಿ, ಮೀನುಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆ ಸಹಕಾರದಲ್ಲಿ 2 ವರ್ಷಗಳಿಗೆ ಸರ್ಕಾರವೇ ಮಾರುಕಟ್ಟೆ ಕಲ್ಪಿಸುವ ಮೂಲಕ ಯುವ ಜನರಿಗೆ ಉದ್ಯೋಗ ಅವಕಾಶ ಕೊಡುವುದರೊಂದಿಗೆ ಮೀನುಗಾರ ಮಹಿಳೆಯರು ಹಾಗೂ ಇತರ ರೈತರಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಟ್ಟಿದೆ ಎಂದರು.
ಸಂಸ್ಥೆಯ ಉಪಾಧ್ಯಕ್ಷ ರಾಜೇಂದ್ರ ಖಾರ್ವಿ ಕರ್ಕಿಕಳಿ, ಮರವಂತೆ ಗ್ರಾಮ ಪಂಚಾಯತಿ ಅಧ್ಯಕ್ಷ ಲೋಕೇಶ್ ಖಾರ್ವಿ SCDCC ಬ್ಯಾಂಕ್ ಮ್ಯಾನೇಜರ್ ಶಂಕರ್ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಈಶ್ವರ ಖಾರ್ವಿ, ಯಶವಂತ ಖಾರ್ವಿ, ಮುರುಳೀಧರ , ಗಂಗೊಳ್ಳಿ ಅಬ್ದುಲ್ ಅಜೀಜ್, ಯೋಗೀಶ, ಜ್ಯೋತಿ, ಸರಸ್ವತಿ ಖಾರ್ವಿ, ಕಛೇರಿ ಸಿಬ್ಬಂದಿ ವೀಣಾ ಡಿ.ಇ.ಒ.
ಮುಖ್ಯ ಕಾರ್ಯನಿರ್ವಹಣಾಧಿಕರಿ ಸಚ್ಚಿದಾನಂದ ಸ್ವಾಗತಿಸಿದರು. ಮಂಜುನಾಥ್ ದೇವಾಡಿಗ ನಿರೂಪಿಸಿದರು. ದಿನೇಶ್ ಖಾರ್ವಿ ವಂದಿಸಿದರು.