ಮಲ್ಪೆ: ಕರ್ನಾಟಕ ಸರಕಾರ, ಜಲಾನಯನ ಅಭಿವೃದ್ದಿ ಇಲಾಖೆ, ಮೀನುಗಾರಿಕಾ ಇಲಾಖೆ ಹಾಗೂ ಸ್ಕಾಡ್ವೆಸ್ ಸಂಸ್ಥೆ ಶಿರಸಿ ಇದರ ಸಹಯೋಗದೊಂದಿಗೆ ರಚಿಸಲ್ಪಟ್ಟ ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯ 2022-23 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆ ಮತ್ತು ಷೇರು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವು ಸೆ.22 ರಂದು ಮಲ್ಪೆ ಮಲ್ಪೆ ಮೀನುಗಾರರ ಸಂಘದ ಸಮುದಾಯ ಭವನದಲ್ಲಿ ಜರುಗಿತು.
ಶಾಸಕ ಯಶ್ ಪಾಲ್ ಸುವರ್ಣ ಕಾರ್ಯಕ್ರಮವನ್ನುದ್ಘಾಟಿಸಿ ಷೇರು ಪತ್ರ ವಿತರಿಸಿ ಮಾತನಾಡಿ, ಮೀನುಗಾರರಿಂದ ಮೀನುಗಾರರಿಗೋಸ್ಕರ ರಚಿಸಲಾದ ಕಂಪನಿ ಇದಾಗಿದ್ದು, ಮೀನುಗಾರರಿಗೆ ಹೆಚ್ಚಿನ ಉಪಯೋಗವಾಗಲಿದೆ, ಸರಕಾರದಿಂದ ಮತ್ತು ಮೀನು ಮಾರಾಟ ಫೆಡರೇಶನ್ ವತಿಯಿಂದ ಅಗತ್ಯವಾದ ಸಹಕಾರವನ್ನು ನೀಡುವ ಭರವಸೆ ನೀಡಿದರು.
ಕಂಪನಿಯ ಪರವಾಗಿ ಆಡಳಿತ ಮಂಡಳಿಯ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.
ಕಂಪನಿಯ ಅಧ್ಯಕ್ಷೆ ವನಜಾ ಜೆ ಪುತ್ರನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಂಪನಿ ಪ್ರಾರಂಭವಾಗಿ ಒಂದು ವರ್ಷವಾಗಿದ್ದು ಮೀನಿನ ಉತ್ಪನ್ನಗಳು ಉತ್ತಮವಾಗಿ ಮಾರಾಟವಾಗುತ್ತಿದ್ದು ಕಚೇರಿ ಮತ್ತು ಉತ್ಪಾದನಾ ಘಟಕಕ್ಕಾಗಿ ಸ್ಥಳ ದೊರಕಿಸಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಮಲ್ಪೆ ಮೀನುಗಾರ ಮಹಿಳೆಯರ ಸಹಕಾರಿ ಸಂಘದ ಅಧ್ಯಕ್ಷೆ ಸುಮಿತ್ರ ಕುಂದರ್, ಸ್ಕಾಡ್ವೆಸ್ ಸಂಸ್ಥೆಯ ಜಿಲ್ಲಾ ಸಂಯೋಜಕ ಗಂಗಾಧರ ನಾಯ್ಕ ಉಪಸ್ಥಿತರಿದ್ದರು.
ಕಂಪನಿಯ ಸಿಇಒ ವಿಷ್ಣು ಪ್ರಸಾದ್ ಕೆ ಕಾಮತ್ ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು. ಜಿಲ್ಲಾ ಸಂಯೋಜಕ ಸೂರಜ್ ಶೆಟ್ಟಿ ಪಿ.ಎಂ.ಎಫ್.ಎಂ ಯೋಜನೆಯ ಮಾಹಿತಿ ನೀಡಿದರು. ನಿರ್ದೇಶಕಿ ಪೂರ್ಣಿಮಾ ಪ್ರಾರ್ಥಿಸಿದರು. ಮತ್ತೊರ್ವ ನಿರ್ದೇಶಕಿ ಜಯಂತಿ ಕೆ ಸಾಲಿಯಾನ್ ವಂದಿಸಿದರು.