ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಶೇ.16 ಡಿವಿಡೆಂಡ್ ಘೋಷಣೆ

ಕೊಡವೂರು: ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ 2022- 23ನೇ ವಾರ್ಷಿಕ ಮಹಾಸಭೆಯು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಠಾರದಲ್ಲಿ ಸಂಘದ ಅಧ್ಯಕ್ಷ ಕೆ.ನಾರಾಯಣ ಬಲ್ಲಾಳ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಜತ್ತನ್ ಸಂಘದ 2022- 23ನೇ ಸಾಲಿನ ವರದಿಯನ್ನು ಮಂಡಿಸಿದರು.

ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಸಂಘದ ಅಧ್ಯಕ್ಷ ನಾರಾಯಣ್ ಬಲ್ಲಾಳ್, ಸಂಘವು 31.03.2023 ಕ್ಕೆ ಎ ಗ್ರೇಡ್ ಅಡಿಟ್ ವರ್ಗಿಕರಣವನ್ನು ಪಡೆದಿದ್ದು, 2022- 23ನೇ ಸಾಲಿನಲ್ಲಿ ಒಟ್ಟು 55.52 ಕೋಟಿ ರೂ. ಸಾಲವನ್ನು ವಿತರಿಸಿ, 2022- 23 ಕ್ಕೆ 70.86.00 ಕೋಟಿ ರೂ. ಸಾಲದ ಹೊರಬಾಕಿಯನ್ನು ಹೊಂದಲಾಗಿದೆ. 96.49 ಲಕ್ಷ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ 2022- 23 ರಲ್ಲಿ ಶೇ. 16 ಡಿವಿಡೆಂಡ್ ನನ್ನು ಘೋಷಿಸಲಾಗಿದೆ. ತ್ವರಿತ ಸೇವೆಯ ಮೂಲಕ ಸದಸ್ಯರ ಹಾಗೂ ಗ್ರಾಹಕರ ಆಶೋತ್ತರಗಳಿಗೆ ಸಂಘ ಸ್ಪಂದಿಸುತ್ತಿದೆ ಎಂದರು.

2022- 23ನೇ ಸಾಲಿನಲ್ಲಿ ಸಂಘದ ಎಲ್ಲಾ ಎ ವರ್ಗದ ಸದಸ್ಯರಿಗೆ ರೂ. 50,000/ ಅಪಘಾತ ಪರಿಹಾರ ಯೋಜನೆಯ ಬಗ್ಗೆ ಜನತಾ ಅಪಘಾತ ವಿಮೆಯನ್ನು ಮಾಡಲಾಗಿದೆ. ಸಂಘವು 2022- 23ನೇ ಸಾಲಿನಲ್ಲಿ ಶೇ.100 ಸಾಲ ವಸೂಲಾತಿಯ ಸಾಧನೆಯನ್ನು ಮಾಡಲಾಗಿದೆ. ಸರಕಾರದ ಆದೇಶದಂತೆ ಸಂಘವು ಮಾದರಿ ಉಪನಿಯಮ ಗಳನ್ನು ಅಳವಡಿಸಿಕೊಳ್ಳುವ ಕುರಿತು ಸರ್ವ ಸದಸ್ಯರ ಅನುಮೋದನೆಯನ್ನು ಪಡೆಯಲಾಯಿತು. ಸಂಘದ ಸದಸ್ಯರ ಒಂದು ಪಾಲಿನ ಮೊಬಲಗು ರೂ. 1000/- ಆಗಲಿದ್ದು ಕಡಿಮೆ ಬೀಳುವ ಮೊತ್ತವನ್ನು ಸದಸ್ಯರು ಭರ್ತಿ ಮಾಡಿಕೊಳ್ಳಬೇಕೆಂದು ಸದಸ್ಯರಿಗೆ ತಿಳಿಸಲಾಯಿತು.

ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ಸಂಘದ ಸದಸ್ಯರ ಸುಮಾರು 66 ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಯಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ. ಅಶೋಕ್ ಕುಮಾರ್ ಕೊಡವೂರು, ನಿರ್ದೇಶಕ ಬಿ. ದಿನೇಶ್ ಪೈ, ಮನೋಜ್ ಎಸ್. ಕರ್ಕೇರ, ಶ್ರೀಷ ಕೊಡವೂರು, ನವೀನ್ ಶೆಟ್ಟಿ ಮೂಡುಬೆಟ್ಟು, ಪ್ರಕಾಶ್ ಜಿ. ಕೊಡವೂರು, ರತ್ನಾಕರ ಅಮೀನ್, ಸುರೇಶ್ ಶೆಟ್ಟಿ ಮೂಡುಬೆಟ್ಟು, ಎನ್ ಭೋಜ ಕೊಡವೂರು, ಕೆ.ಕಾಳು ಸೇರಿಗಾರ ಕೊಡವೂರು, ಸತೀಶ್ ನಾಯ್ಕ್, ಶ್ರೀಮತಿ ಕುಸುಮಾ ಜಿ. ಪ್ರಭು, ಶ್ರೀಮತಿ ಬಬಿತಾ ಉಪಸ್ಥಿತರಿದ್ದರು.

ಉಪಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ವಂದಿಸಿದರು.