ಬ್ರಹ್ಮಾವರ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಉತ್ಸವ ನಾಳೆಯಿಂದ ಫೆ.15ರ ವರೆಗೆ ದೇವಳದ ಸನ್ನಿಧಿಯಲ್ಲಿ ನಡೆಯಲಿದೆ.
ಫೆ.12ರಂದು ಕುಂಭ ಸಂಕ್ರಮಣ, ಕೆಂಡಸೇವೆ. ಫೆ.13ರಂದು ಮನ್ಮಹಾರಥೋತ್ಸವ, ಫೆ. 14ರಂದು ದೀಪೋತ್ಸವ, ಐದು ಮೇಳದವರಿಂದ ಯಕ್ಷಗಾನ ಸೇವೆ ಆಟ ಜರುಗಲಿದೆ.
ಸೂಚನೆ:
ಫೆ. 12ರ ಶನಿವಾರ ರಾತ್ರಿ ಗಂಟೆ 8 ರ ವರೆಗೆ ಮಾತ್ರ ದೇವರ ದರ್ಶನ ಹಾಗೂ ಸೇವೆಗಳಿಗೆ ಅವಕಾಶ ಇರುತ್ತದೆ. ಕೆಂಡಸೇವಾ ನಂತರ ಸೇವೆಗಳಿಗೆ ಅವಕಾಶವಿರುತ್ತದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.
ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ. ಮಹೇಶ, ಅನುವಂಶಿಕ ಮೊಕ್ತೇಸರ ಎಚ್.ಧನಂಜಯ ಶೆಟ್ಟಿ, ಎಚ್.ಸುರೇಂದ್ರ ಶೆಟ್ಟಿ, ಎಚ್.ಪ್ರಭಾಕರ್ ಶೆಟ್ಟಿ, ಎಚ್.ಶಂಭು ಶೆಟ್ಟಿ, ಆರ್. ಶ್ರೀನಿವಾಸ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಶ್ರೀಕ್ಷೇತ್ರ ಮಂದಾರ್ತಿ
ಶ್ರೀದುರ್ಗಾಪರಮೇಶ್ವರೀ ದೇವಸ್ಥಾನ
ಅಂಚೆ: ಮಂದಾರ್ತಿ, ಉಡುಪಿ ಜಿಲ್ಲೆ- 576223
ದೂರವಾಣಿ: 0820 – 2568333, 2568433, 2568533 ಸಂಪರ್ಕಿಸಬಹುದಾಗಿದೆ.