ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ‘ನೀವು ನನಗೆ ಸಾಕ್ಷಿಗಳಾಗುವಿರಿ’ ಎಂಬ ವಿಷಯದೊಂದಿಗೆ ಜ. 22 ರಿಂದ 26 ರವರೆಗೆ ಜರಗಲಿದ್ದು
ಒಟ್ಟು 35 ಬಲಿ ಪೂಜೆಗಳು ನಡೆಯಲಿದೆ.
ಜ. 22ರ ಬೆಳಿಗ್ಗೆ 10 ಗಂಟೆಗೆ (ಕೊಂಕಣಿ) ಉಡುಪಿಯ ಧರ್ಮಾಧ್ಯಕ್ಷ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ, ಜ. 23 ರಂದು ಬೆಳಿಗ್ಗೆ 10ಕ್ಕೆ (ಕನ್ನಡ) ಪುತ್ತೂರಿನ ಧರ್ಮಾಧ್ಯಕ್ಷ ರೈ| ರೆ| ಡಾ| ಗೀವರ್ಗೀಸ್ ಮಾರ್ ಮಕಾರಿಯೋಸ್ ಕಲಯಿಲ್, ಜ. 24 ರಂದು ಸಂಜೆ 6ಕ್ಕೆ (ಕನ್ನಡ) ಬೆಳ್ತಂಗಡಿ ಧರ್ಮಾಧ್ಯಕ್ಷ ರೈ| ರೆ| ಡಾ| ಲಾರೆನ್ಸ್ ಮುಕ್ಕುಯಿ, ಜ. 25 ರಂದು ಬೆಳಿಗ್ಗೆ 10ಕ್ಕೆ (ಕೊಂಕಣಿ) ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ, ಜ. 26ರಂದು ಬೆಳಿಗ್ಗೆ 10 ಕ್ಕೆ (ಕೊಂಕಣಿ) ಬೆಂಗಳೂರಿನ ನಿವೃತ್ತ ಮಹಾ ಧರ್ಮಾಧ್ಯಕ್ಷ ರೈ| ರೆ| ಡಾ| ಬರ್ನಾರ್ಡ್ ಮೊರಾಸ್ ಅವರು ಪ್ರಮುಖ ಬಲಿಪೂಜೆ ನೆರವೇರಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.