ಇಂದಿನಿಂದ ಮೇ. 10ರ ವರೆಗೆ ಹಿರಿಯಡ್ಕ ಮಹತೋಭಾರ ಶ್ರೀ ವೀರಭದ್ರ ದೇವಸ್ಥಾನ ಸಿರಿಜಾತ್ರಾ ಮಹೋತ್ಸವ

ಹಿರಿಯಡ್ಕ: ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ, ಶ್ರೀ ಕ್ಷೇತ್ರ ಹಿರಿಯಡ್ಕ ಉಡುಪಿ ತಾಲೂಕು ಮತ್ತು ಜಿಲ್ಲೆ 576113.
ಮೊಬೈಲ್ 9481440240

ಭಗವದ್ಭಕ್ತರೇ ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರದ ಮೇಷ ಮಾಸ ದಿನ 21 ಸಲುವ ವೈಶಾಖ ಮಾಸದ ಪೂರ್ಣಮಿ ತಾ.05-05-2023ನೇ ಶುಕ್ರವಾರ ಮೊದಲ್ಗೊಂಡು ವೈಶಾಖ ಬಹುಳ ಪಂಚಮಿ ತಾ. 10-05-2023ನೇ ಬುಧವಾರ ಪರ್ಯಂತ ಶ್ರೀ ಕ್ಷೇತ್ರ ಹಿರಿಯಡ್ಕ ಶ್ರೀ ವೀರಭದ್ರ ಸ್ವಾಮಿ ಸನ್ನಿಧಿಯಲ್ಲಿ ಸಂಪ್ರದಾಯದಂತೆ
ಧ್ವಜಾರೋಹಣ ಮಹೋತ್ಸವಗಳು ಕಾರ್ಯಕ್ರಮದಲ್ಲಿ ಕಾಣಿಸಿದಂತೆ ಜರಗಲಿರುವುದು. ತತ್ಸಂಬಂಧ ತಾವುಗಳು ತಮ್ಮ ಇಷ್ಟ ಮಿತ್ರ ಬಂದು ಬಾಂಧವರೊಡಗೂಡಿ ಆಗಮಿಸಿ, ಶ್ರೀದೇವರ ಶ್ರೀಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ, ಕೃತಾರ್ಥರಾಗಬೇಕಾಗಿ ಅಪೇಕ್ಷಿಸುವ, ಶ್ರೀ ರವಿ ಎಸ್. ಅಂಗಡಿ, ಆಡಳಿತಾಧಿಕಾರಿ, ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ, ಹಿರಿಯಡ್ಕ ಹಾಗೂ ತಹಶೀಲ್ದಾರರು ಉಡುಪಿ.
ಹಾಗೂ ತಂತ್ರಿ, ಅರ್ಚಕರು, ಸಿಬ್ಬಂದಿ ವರ್ಗ ಮತ್ತು ಊರಿನ ಹತ್ತು ಸಮಸ್ತರು

ಧಾರ್ಮಿಕ ಕಾರ್ಯಕ್ರಮಗಳು

ದಿನಾಂಕ 05.05.2023ನೇ ಶುಕ್ರವಾರ
ಪ್ರಾತಃ ಗಂಟೆ 8ಕ್ಕೆ ಧ್ವಜಾರೋಹಣ, ಗಣಯಾಗ, ನಮಕ ಪ್ರಧಾನ ಹೋಮ, ರಾತ್ರಿ ಗಂಟೆ 6.30 ರಿಂದ ಆರಾಧನೆ ಪೂಜೆ, ಪೂರ್ಣಿಮ ಉತ್ಸವ, ರಾತ್ರಿ ಗಂಟೆ 9 ರಿಂದ ಹಾಲುಹಬ್ಬ, ಸವಾರಿ ಬಲಿ, ಬ್ರಹ್ಮ ಮಂಡಲ, ಭೂತ ಬಲಿ ಇತ್ಯಾದಿ.

ದಿನಾಂಕ 06.05.2023ನೇ ಶನಿವಾರ
ರಾತ್ರಿ ಗಂಟೆ 7 ರಿಂದ ಆರಾಧನೆ ಪೂಜೆ, ಬೈಗಿನ ಬಲಿ, ಸವಾರಿ ಬಲಿ, ಆರಾಧನಾ ಬಲಿ.

ದಿನಾಂಕ 07.05.2023ನೇ ರವಿವಾರ
ರಾತ್ರಿ ಗಂಟೆ 7 ರಿಂದ ಆರಾಧನೆ ಪೂಜೆ, ನಿತ್ಯ ಬಲಿ, ಸವಾರಿ ಬಲಿ, ಮಹಾರಂಗಪೂಜೆ, ಭೂತಬಲಿ.

ದಿನಾಂಕ 08.05.2023ನೇ ಸೋಮವಾರ
ಪ್ರಾತಃ ಸಂಕಷ್ಟಿ ಗಣ ಯಾಗ, ಮಧ್ಯಾಹ್ನ ಗಂಟೆ 12ಕ್ಕೆ ರಥಾರೋಹಣ, ರಾತ್ರಿ ಗಂಟೆ 6 ರಿಂದ ಶ್ರೀ ಮನ್ಮಹಾರಥೋತ್ಸವ, ಭೂತಬಲಿ, ಕವಟ ಪೂರಾಣ.

ದಿನಾಂಕ 09.05.2023ನೇ ಮಂಗಳವಾರ
ಪ್ರಾತಃ ಗಂಟೆ 8 ರಿಂದ ಕವಾಟೋದ್ಘಾಟನೆ, ತುಲಾಭಾರ ಸೇವೆ, ಮಹಾಪೂಜೆ ಇತ್ಯಾದಿ. ರಾತ್ರಿ ಗಂಟೆ 7 ರಿಂದ ಆರಾಧನೆ ಪೂಜೆ, ಓಕುಳಿ, ಅವಭೃತ ಸ್ನಾನ, ಧ್ವಜಾರೋಹಣ.

ದಿನಾಂಕ 10.05.2023ನೇ ಬುಧವಾರ
ಪ್ರಾತಃ ಗಂಟೆ 8 ರಿಂದ ಮಹಾಸಂಪ್ರೋಕ್ಷಣೆ, ಚಂಡಿಕಾ ಯಾಗ, ಮಾರಿ ಪೂಜೆ, ಅನ್ನ ಸಂತರ್ಪಣೆ, ಸಮಾರಾಧನೆ, ರಾತ್ರಿ ಗಂಟೆ 8 ರಿಂದ ರಾತ್ರಿ ಪೂಜೆ, ಮಾರಿ ಪೂಜೆ, ಮಾರಿ ಬಲಿ.