ಉಡುಪಿ ಪೋದಾ‌ರ್ ಅಂತರಾಷ್ಟ್ರೀಯ ಶಾಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ

ಉಡುಪಿ: ಪಾಠದ ಜೊತೆಗೆ ಮಕ್ಕಳಲ್ಲಿರುವ ವಿವಿಧ ಪ್ರತಿಭೆಗಳನ್ನು ಹೊರ ತರುವ ಉದ್ದೇಶದಿಂದ 2026-27ನೇ ಸಾಲಿನ ಪೋದಾರ್ ಶಾಲಾ ವಾರ್ಷಿಕೋತ್ಸವನ್ನು ಟೌನ್ ಹಾಲ್ ಸಭಾಂಗಣದಲ್ಲಿ ನಡೆಸಲಾಯಿತು.

ರಾಷ್ಟ್ರಗೀತೆಯನ್ನು ಹಾಡಿ, ದೀಪ ಬೆಳಗಿಸಿ, ಪುಷ್ಪ ನಮನವನ್ನು ಸಲ್ಲಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶಾಲೆಯ ಪ್ರಾಂಶುಪಾಲೆ ಶ್ರೀಮತಿ ನೇತ್ರಾ ಹೆಚ್‌ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಹೆಯ ಔಷಧಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಕೆ.ಶ್ರೀಧರ್ ರಂಗನಾಥ್ ಪೈ ಅವರು ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ‘ವಿಕಸಿತ ಭಾರತ 2047’ ನವ ಸಂಕಲ್ಪದ ಕುರಿತು ಮಾತನಾಡಿದರು.

ಹಾಗೆಯೇ ಗೌರವ ಅತಿಥಿಗಳಾಗಿ ಆಗಮಿಸಿದ ಎಸ್.ಡಿ.ಎಂ. ಆರ್ಯವೇ್ರದ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತ ಕೆ.ವಿ ರವರು ಮಕ್ಕಳ ಕಾಳಜಿ ಮತ್ತು ಮಕ್ಕಳ ಆರೈಕೆಯ ಬಗ್ಗೆ ಮಾಹಿತಿ ತಿಳಿಸಿ ಕೊಟ್ಟರು. 2025-26ನೇ ಶೈಕ್ಷಣಿಕ ಸಾಲಿನ 10ನೇ ತರಗತಿಯ ಸಾಧಕ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.

ಎಂಬ ಪೋದಾರ್ ಶಾಲೆಯ ವಿದ್ಯಾರ್ಥಿಗಳು ವಸುದೈವ ಕುಟುಂಬ(ವಿಶ್ವವೇ ಒಂದು ಕುಟುಂಬ) ಶೀರ್ಷಿಕೆಯನ್ನು ಆಧಾರಿಸಿ ವಿದ್ಯಾರ್ಥಿಗಳು ವಿಶ್ವದ ವಿವಿಧ ದೇಶಗಳ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ನೃತ್ಯ, ಸಂಗೀತ, ನಾಟಕ, ವೇಷಭೂಷಣಗಳನ್ನು ಹಾಗೂ ಶ್ರೀಕೃಷ್ಣನ ದಿವ್ಯ ಜೀವನ ಹಾಗೂ ಮೋಹಕ ಪಯಣವನ್ನು ಬಿಂಬಿಸುವ ಕೃಷ್ಣಾಷ್ಟಮಿಯ ಭವ್ಯ ನೃತ್ಯರೂಪಕವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರದರ್ಶಿಸಿದರು.

ಶಿಕ್ಷಕರು ಮತ್ತು ಪೋಷಕರು ಸಹ ನೃತ್ಯ ಮಾಡುವ ಮೂಲಕ ನೆರೆದವರನ್ನು ಆಕರ್ಷಿಸಿದರು.

ಈ ಶೀರ್ಷಿಕೆಯು ನೆರೆದವರಲ್ಲಿ ಏಕತೆ, ಸಾಮರಸ್ಯ ಹಾಗೂ ವಿಶ್ವ ಭ್ರಾತೃತ್ವದ ಆಶಯವನ್ನು ಪ್ರತಿಬಿಂಬಿಸಿತು.

ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಗಳಾದ ಆರವ್ ಹೆಗ್ಡೆ, ಪವಿತ್ರ ನಾಯಕ್, ಆದೀಶ್ ಹೆಗ್ಡೆ, ಪ್ರಿಯಾಂಕ ರಾವ್ ಮಾಡಿದರೆ, ಹಲೀಮಾ ಸ್ವಾಗತ.

ನಿವಾಂಶಿ ವಂದನಾರ್ಪಣೆಯನ್ನು ಮಾಡಿದರು. ಶಾಲೆಯ ಪ್ರಾಂಶುಪಾಲೆ ಶ್ರೀಮತಿ ನೇತ್ರಾ ಹೆಚ್. ಮುಖ್ಯ ಅತಿಥಿ ಡಾ. ಕೆ.ಶ್ರೀಧರ್ ರಂಗನಾಥ್ ಪೈ. ಗೌರವ ಅತಿಥಿ ಡಾ. ಮಮತ ಕೆ.ವಿ. ಪೋದಾರ್ ಪ್ರೆಪ್ ಮುಖ್ಯ ಶಿಕ್ಷಕಿ ಶ್ರೀಮತಿ ಗೀತಾ ಲವೀನ್ ಪೂಜಾರಿ, ಶಾಲೆಯ ಆಡಳಿತಾಧಿಕಾರಿ ಹರೀಶ್ ನಾಯಕ್, ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಹಾಗೂ ಪೋಷಕರು ಪಾಲ್ಗೊಂಡಿದ್ದರು.