ಮಣಿಪಾಲ: ಮಣಿಪಾಲ ಅಕಾಡೆಮಿ ಹೈಯರ್ ಎಜುಕೇಶನ್ ನ ಪ್ರತಿಷ್ಠಿತ ಘಟಕವಾಗಿರುವ ಭಾರತದ
ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ ಎಂಬ ಗೌರವಕ್ಕೆ ಪಾತ್ರವಾಗಿರುವ ಮಣಿಪಾಲ್ ಆರೋಗ್ಯ
ವಿಜ್ಞಾನಗಳ ಕಾಲೇಜು ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಸಾಯನ್ಸಸ್ ಇದರ 24 ನೇಯ ವಾರ್ಷಿಕ
ಪ್ರಶಸ್ತಿ ಪ್ರದಾನ ಸಮಾರಂಭ ನ. 21 ರಂದು ನಡೆಯಿತು. ಭಾರತದ ಆರೋಗ್ಯ ವಿಜ್ಞಾನದ ವೃತ್ತಿಪರ
ಕ್ಷೇತ್ರದಲ್ಲಿಯೇ ಎಂಸಿಪಿಎಚ್ಗೆ ವಿಶಿಷ್ಟವಾದ ಸ್ಥಾನವಿದೆ. ಇಲ್ಲಿ ರೋಗಿಗಳ ಕಾಯಿಲೆ ಪತ್ತೆ, ರೋಗ ವಿಧಾನ, ರೋಗಿಯ
ಅಸೌಖ್ಯದ ವಿವಿಧ ಸ್ಥಿತಿಗಳ ನಿಭಾಯಿಸುವಿಕೆಗಳಲ್ಲಿ ಬಹುಶಿಸ್ತೀಯ ಆರೋಗ್ಯ ಶುಶ್ರೂಷಾ ಬಳಗವು ಅತ್ಯಂತ ಪ್ರಮುಖ ಪಾತ್ರ
ವಹಿಸುತ್ತಿದ್ದು ರೋಗಿಗಳ ಗುಣಮುಖತೆಯನ್ನು ವೃದ್ಧಿಸಿರುವುದು ಗಮನಾರ್ಹವಾಗಿದೆ.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ವೈಸ್ ಛಾನ್ಸಲರ್ ಲೆ, ಜ. ಡಾ. ಎಂ. ಡಿ. ವೆಂಕಟೇಶ್ ಮಾತನಾಡಿ
ಜಾಗತಿಕವಾಗಿ ಶೀಘ್ರ ವೃದ್ಧಿ ಹೊಂದುತ್ತಿರುವ ಆರೋಗ್ಯ ಆರೈಕೆಯ ಕ್ಷೇತ್ರಕ್ಕೆ ಎಂಸಿಪಿಎಚ್ ಅತ್ಯುತ್ತಮ
ಪದವೀಧರರನ್ನು ಒದಗಿಸುವಲ್ಲಿ ಬದ್ಧವಾಗಿದೆ. ಮಾಹೆಯ ಈ ಪ್ರತಿಷ್ಠಿತ ವಿಭಾಗವು ಆರಂಭವಾದ ದಿನಗಳಿಂದಲೂ ಅತ್ಯುತ್ತಮ ಪ್ರಗತಿಯನ್ನು ದಾಖಲಿಸಿದ್ದು, ಭಾರತದ ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿಯೇ ಮಹತ್ತ್ವದ ಸ್ಥಾನವನ್ನು ಹೊಂದುವಲ್ಲಿ ಯಶಸ್ವಿಯಾಗಿದೆ. ಈ ವಿಭಾಗವು ಸಮಕಾಲೀನ ಸಂದರ್ಭದ ಬೇಡಿಕೆಗೆ ತಕ್ಕಂಥ ಆರೋಗ್ಯ ಪ್ರವಿಧಾನ
[ಪ್ರೊಗ್ರಾಮ್]ಗಳನ್ನು, ಅತ್ಯುತ್ಕೃಷ್ಠವಾದ ಮೂಲಸೌಕರ್ಯಗಳನ್ನು, ಸುಸಜ್ಜಿತವಾದ ಶುಶ್ರೂಷಾ ಸೌಲಭ್ಯಗಳನ್ನು,
ಸಮರ್ಪಣಭಾವದ, ಉನ್ನತ ಅರ್ಹತೆಯ ಬೋಧಕ ಸಿಬ್ಬಂದಿಗಳನ್ನು ಹೊಂದಿದೆ’ ಎಂದರು.
ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಪ್ರೊ ವೈಸ್ ಛಾನ್ಸಲರ್ ಡಾ. ಶರತ್ ಕೆ. ರಾವ್ ಮಾತನಾಡಿ,
‘’ಮಾಹೆಯ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಸಾಯನ್ಸಸ್ ಘಟಕವು 7೦ ವಿಭಿನ್ನ ಪ್ರವಿಧಾನ [ಶೈಕ್ಷಣಿಕ
ಪ್ರೋಗ್ರಾಮ್]ಗಳನ್ನು ಹೊಂದಿದ್ದು ಇದು ಸಂಸ್ಥೆಯ ಹಿರಿಮೆಯನ್ನು ಸೂಚಿಸುತ್ತದೆ. ಜಗತ್ತಿನ ಬೇರೆ ಬೇರೆ ಕಡೆಯ
ವಿಶ್ವವಿದ್ಯಾನಿಲಯಗಳಲ್ಲಿ, ಆಸ್ಪತ್ರೆಗಳಲ್ಲಿ, ಆರೋಗ್ಯ ಆರೈಕೆಯ ಸಂಸ್ಥೆಗಳಲ್ಲಿ ಮತ್ತು ಖಾಸಗಿ ಶುಶ್ರೂಷಾಲಯಗಳಲ್ಲಿ
ಎಂಸಿಪಿಎಚ್ನ ಪೂರ್ವ ವಿದ್ಯಾರ್ಥಿಗಳು ಗಣನೀಯ ಸಂಖ್ಯೆಯಲ್ಲಿರುವುದು ಹೆಮ್ಮೆ ತರುವ ವಿಚಾರವಾಗಿದೆ’ ಎಂದು ಹೇಳಿದರು.
ಮಣಿಪಾಲ್ ಕಾಲೇಜ್ ಆಪ್ ಹೆಲ್ತ್ ಪ್ರೊಫೆಶನಲ್ಸ್ನ ಡೀನ್ ಡಾ. ಜಿ. ಅರುಣ್ ಮಯ್ಯ ಸ್ವಾಗತಿಸಿ ಮಾತನಾಡಿ,
ಪ್ರಸ್ತುತ 2023ನೆಯ ವರ್ಷದಲ್ಲಿ ಬೋಧಕರ ಮತ್ತು ವಿದ್ಯಾರ್ಥಿಗಳ ಪ್ರಶಂಸನೀಯ ಸಾಧನೆಯ ಸ್ಥೂಲ
ಚಿತ್ರಣವನ್ನು ನೀಡಿದರು.
ದೆಹಲಿಯ ಏಮ್ಸ್ ಎಐಎಂಎಸ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಪ್ರಿಯಾಂಕಾ ಗುಪ್ತ ಅವರಿಗೆ ಪೂರ್ವ ವಿದ್ಯಾರ್ಥಿ ಪ್ರಶಸ್ತಿ-2023 ನೀಡಲಾಯಿತು..
ಅಸೋಸಿಯೇಟ್ ಡೀನ್ಗಳಾದ ಡಾ. ರೆಷ್ಮಿ ಬಿ. ಮತ್ತು ಡಾ. ವೆಂಕಟರಾಜ ಐತಾಳ್, ಪೂರ್ವ ವಿದ್ಯಾರ್ಥಿಗಳ ಸಂಪರ್ಕ
ವಿಭಾಗದ ಮುಖ್ಯಸ್ಥೆ ಡಾ. ಶೋವನ್ ಸಹಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.