ಮಾ. 01 ರಿಂದ 03 ರವರೆಗೆ ಅಂಜಾರು ಶ್ರೀ ಬ್ರಹ್ಮ ಬೈದರ್ಕಳ ಗರಡಿ ನೇಮೋತ್ಸವ

ಹಿರಿಯಡಕ: ಅಂಜಾರು ಗ್ರಾಮದ ಬ್ರಹ್ಮಬೈದರ್ಕಳ ಗರಡಿಯ ಕಾಲಾವಧಿ ನೇಮೋತ್ಸವವು ಮಾರ್ಚ್ 01 ರಿಂದ 03 ರವರೆಗೆ
ಜರಗಲಿದೆ.

ಕಾರ್ಯಕ್ರಮಗಳು:

01.03.2023 ನೇ ಬುಧವಾರ ರಾತ್ರಿ ಗಂಟೆ 9:30ಕ್ಕೆ ಅಗೇಲು ಸೇವೆ

02.03.2023ನೇ ಗುರುವಾರ ರಾತ್ರಿ ಗಂಟೆ 7.00ಕ್ಕೆ ತಡ್ಸಲೆ ಹೊರಡುವುದು ರಾತ್ರಿ ಬೈದರ್ಕಳ ನೇಮೋತ್ಸವ ರಾತ್ರಿ ಗಂಟೆ 12.00ಕ್ಕೆ ಬೈದರ್ಕಳ ಮಹಾಮಾಯಿ ದೇವಿಯ ದರ್ಶನ ಹಾಗೂ ಶಿವರಾಯ ದರ್ಶನ ರಾತ್ರಿ ಗಂಟೆ 2.30 ಕ್ಕೆ ಹುಲಿ ಚಾಮುಂಡಿ ಕೋಲ ರಾತ್ರಿ ಗಂಟೆ 3.00ಕ್ಕೆ ಧೂಮಾವತಿ ಕೋಲ

03.03.2023ನೇ ಶುಕ್ರವಾರ ಬೆಳಿಗ್ಗೆ ಗಂಟೆ 9.30ಕ್ಕೆ ಮಾಯಂದಾಲೆ ಕೋಲ

ಭಕ್ತಾದಿಗಳಾದ ತಾವೆಲ್ಲರೂ ಈ ದೇವತಾ ಕಾರ್ಯದಲ್ಲಿ ಭಾಗವಹಿಸಿ, ತನು- ಮನ- ಧನಗಳಿಂದ ಸಕ್ರಿಯ ಸಹಕಾರವನ್ನಿತ್ತು ಶ್ರೀಮುಡಿ ಗಂಧ- ಪ್ರಸಾದವನ್ನು ಸ್ವೀಕರಿಸಿ, ಶ್ರೀ ಬ್ರಹ್ಮಬೈದರ್ಕಳ ದೈವಗಳ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿಧ್ಯಾದರ ಶೆಟ್ಟಿ ಗೌರವಾಧ್ಯಕ್ಷರು
ಸುಧೀರ್ ಹೆಗ್ಡೆ ಕಾರ್ಯದರ್ಶಿ
ಸುಂದರ ಪೂಜಾರಿ ಅರ್ಚಕರು
ಎ‌. ಸುಭಾಶ್ಚಂದ್ರ ಹೆಗ್ಡೆ ಅಧ್ಯಕ್ಷರು
ಅಂಜಾರು, ಓಂತಿಬೆಟ್ಟು, ಮಾಂಬೆಟ್ಟು, ಕಾಜಾರಗುತ್ತು, ಮುತ್ತೂರು, ಪಡುಅಂಜಾರು, ಮೂಡುಅಂಜಾರು, ಪಾಪುಜೆ ಮತ್ತು ಮೇಲ್ ಕೋಲ್ಯಾರು ಗ್ರಾಮಸ್ಥರು ಹಾಗೂ ಕಾರ್ಯಕಾರಿ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿ.ಸೂ. ಮಾ.02 ರಂದು ರಾತ್ರಿ ಗಂಟೆ 8.30 ಕ್ಕೆ ಮಹಾಪೂಜೆಯಾಗಿ ಅನ್ನಸಂತರ್ಪಣೆ ಜರಗಲಿರುವುದು.