ಉಡುಪಿ:ಉಡುಪಿಯಲ್ಲಿ ‘ಏಂಜೆಲ್ಸ್ ಜುಂಬಾ ಆಂಡ್ ಫಿಟ್ನೆಸ್’ ತರಗತಿಗಳು ಶುಭಾರಂಭ ಕಂಡಿವೆ. ಆರೋಗ್ಯ, ತೂಕನಿಯಂತ್ರಣ ಮತ್ತು ದೈಹಿಕ–ಮಾನಸಿಕ ಚುರುಕುತನವನ್ನು ಉತ್ತೇಜಿಸುವ ಉದ್ದೇಶದಿಂದ ಈ ತರಗತಿಗಳನ್ನು ಆರಂಭಿಸಲಾಗಿದೆ. ಜುಂಬಾ ನೃತ್ಯಾಭ್ಯಾಸಗಳ ಮೂಲಕ ಮನರಂಜನೆಯ ಜೊತೆಗೂಡಿ ಫಿಟ್ನೆಸ್ ಸಾಧಿಸುವ ಅವಕಾಶವನ್ನು ಈ ಕೇಂದ್ರ ಒದಗಿಸುತ್ತದೆ.
ತರಗತಿಗಳಲ್ಲಿ ಸರಿಯಾದ ವ್ಯಾಯಾಮ ವಿಧಾನ, ಮಾರ್ಗದರ್ಶನ, ಮತ್ತು ಫಲಿತಾಂಶ ಕೇಂದ್ರೀಕೃತ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕೇವಲ ಟೈಮ್‌ಪಾಸ್ ಅಲ್ಲ, ನಿಯಮಿತತೆ, ಶಿಸ್ತು ಮತ್ತು ನಿರಂತರ ಪ್ರಗತಿಗೆ ಇಲ್ಲಿ ಆದ್ಯತೆ ಸಿಗಲಿದೆ.
ತರಗತಿಗಳನ್ನು ZIN ಇನ್‌ಸ್ಟ್ರಕ್ಟರ್ ಪೂರ್ಣಿಮಾ ಪೆರ್ಗಣ್ಣ ನಡೆಸಲಿದ್ದು, ಭಾಗವಹಿಸಲು ಆಸಕ್ತಿ ಇರುವವರು ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು.ಆರೋಗ್ಯಕರ ಜೀವನಶೈಲಿ ಮತ್ತು ಆತ್ಮವಿಶ್ವಾಸ ಬೆಳೆಸಲು ಬಯಸುವವರಿಗೆ ಈ ತರಗತಿಗಳು ಉತ್ತಮ ವೇದಿಕೆಯಾಗಲಿವೆ.
















