ಉಡುಪಿ: ಅಂಗಡಿ, ಮಳಿಗೆ, ಕೈಗಾರಿಕೆ ತೆರೆಯಲು ಗೊಂದಲಗಳಿದ್ದಲ್ಲಿ ಈ ದೂರವಾಣಿಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ

ಉಡುಪಿ ಮೇ 1: ಕೊರೊನಾ ವೈರಾಣು (ಕೋವಿಡ್-19) ಸಂಬಂದ ಲಾಕ್ ಡೌನ್ ಅವದಿಯಲ್ಲಿ ಜಿಲ್ಲೆಯ ಗ್ರಾಮೀಣ, ನಗರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸಲು ಮತ್ತು ಜಿಲ್ಲೆಯಲ್ಲಿ ಅಂಗಡಿ, ಮಳಿಗೆಗಳು ತೆರೆಯುವ ಬಗ್ಗೆ, ಈಗಾಗಲೇ ಸ್ಪಷ್ಟ ರೂಪುರೇಷೆಗಳೊಂದಿಗೆ ಆದೇಶಿಸಲಾಗಿದ್ದು, ಈ ಬಗ್ಗೆ ಸಾರ್ವಜನಿಕರು ಪದೇ ಪದೇ ಸ್ಪಷ್ಟತೆಗಾಗಿ ಜಿಲ್ಲಾಧಿಕಾರಿ/ ಜಿಲ್ಲಾಧಿಕಾರಿಯವರ ಕಛೇರಿಗೆ ಅನೇಕ ದೂರವಾಣಿ ಕರೆಗಳು ಬರುತ್ತಿರುವುದರಿಂದ ಈ ವಿಷಯದ ಕುರಿತು ಯಾವುದೇ ಮಾಹಿತಿ ಬೇಕಾದಲ್ಲಿ, ಈ ಕೆಳಗೆ ತಿಳಿಸಿರುವ ಆಧಿಕಾರಿಗಳಿಂದ  ದೂರವಾಣಿ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಅಧಿಕಾರಿಯ ಹೆಸರು, ದೂರವಾಣಿ ಸಂಖ್ಯೆ, ಬಾಲಕೃಷ್ಣ  ಜಿಲ್ಲಾ ಕಾರ್ಮಿಕ ಅಧಿಕಾರಿ, ಉಡುಪಿ ಜಿಲ್ಲೆ

ಮೊಬೈಲ್ ನಂ: 9448334324, ರಾನ್ ‌ಜಿ. ನಾಯ್ಕ್,  ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಉಡುಪಿ ಜಿಲ್ಲೆ, ಮೊಬೈಲ್ ನಂ: 9480092738

ಕೈಗಾರಿಕೆ ಪ್ರದೇಶ, ವಸಹಾತುವಿನಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸುವ ಬಗ್ಗೆ ಯಾವುದೇ ಮಾಹಿತಿ ಬೇಕಾದಲ್ಲಿ ಈ ಕೆಳಗೆ ತಿಳಿಸಿರುವ ಆಧಿಕಾರಿಗಳಿಂದ ದೂರವಾಣಿ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಗೋಕುಲ್‌ದಾಸ ನಾಯಕ್ , ಜಂಟಿ ನಿರ್ದೇಶಕರು , ಜಿಲ್ಲಾ ಕೈಗಾರಿಕಾ ಕೇಂದ್ರ ಮಣಿಪಾಲ , ಮೊಬೈಲ್ ನಂ: 8277052707,

ಸೀತಾರಾಮ ಶೆಟ್ಟಿ , ಸಹಾಯಕ ನಿರ್ದೇಶಕರು , ಜಿಲ್ಲಾ ಕೈಗಾರಿಕಾ ಕೇಂದ್ರ ಮಣಿಪಾಲ, ಮೊಬೈಲ್ ನಂ: 9448623952