ಭಾರತ್ ಬೀಡಿ ಸಂಸ್ಥೆಯ ನಿರ್ದೇಶಕ ಅನಂತ್ ಪೈ ನಿಧನ

ಮಂಗಳೂರು: ಭಾರತ್ ಬೀಡಿ ಲಿ.ನ ನಿರ್ದೇಶಕ ಅನಂತ ಜಿ ಪೈ ಭಾನುವಾರ  ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿಚಾರ ಸಂಕಿರಣವೊಂದರಲ್ಲಿ ಪಾಲ್ಗೊಳ್ಳಲು ಮಧ್ಯಪ್ರದೇಶದ  ಇಂದೋರ್ ಗೆ ತೆರಳಿದ್ದ ಇವರು ಇಂಧೋರ್ ನಲ್ಲಿ ಕೊನೆಯುಸಿರೆಳೆದಿದ್ದಾರೆ.

ಅನಂತ ಪೈ ಕಾರ್ಕಳದ ಭುವನೇಂದ್ರ ಕಾಲೇಜು ಟ್ರಸ್ಟ್ ನ ಅಧ್ಯಕ್ಷರಾಗಿದ್ದರು. ವಿವಿಧ ಧಾರ್ಮಿಕ, ಶೈಕ್ಷಣಿಕ, ಸೇವಾ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡಿದ್ದರು.