ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಸ್ವಾವಲಂಬಿ ‘ರಾಮು’!! ರಾಮುವಿನ ಅದ್ಬುತ ಕೌಶಲ್ಯಕ್ಕೆ ಮರುಳಾದ ಉದ್ಯಮಿ ಆನಂದ್ ಮಹೀಂದ್ರ!

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿರುವ ‘ರಾಮು’, ಸಾಮಾನ್ಯ ಹೋರಿಯಲ್ಲ. ಬಿಲಿಯನೇರ್ ಉದ್ಯಮಿ ಆನಂದ್ ಮಹೀಂದ್ರ ಈತನ ಕೆಲಸ ಕಾರ್ಯಕಂಡು ಸೂರ್ತಿ ಪಡೆದಿದ್ದಾರೆ. ದಿನವಿಡೀ ಕೆಲಸ ಮಾಡುವ ಹೋರಿಯ ವೀಡಿಯೊವನ್ನು ಹಂಚಿಕೊಂಡಿರುವ ಅವರು ಅದರ ಗಮನಾರ್ಹ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.

“ರಾಮುವಿಗೆ ಮಾತನಾಡಲು ಸಾಧ್ಯವಾಗುತ್ತಿದ್ದರೆ, ಆತ ಪ್ರಪಂಚದ ಇತರ ಸ್ವಯಂ ಘೋಷಿತ ಪ್ರೇರಕ ಭಾಷಣಕಾರರಿಗಿಂತ ‘ಲೈಫ್-ಪಾಸಿಟಿವ್’ ಆಗಿರುವುದು ಹೇಗೆ ಎಂಬುದರ ಕುರಿತು ಉತ್ತಮ ಸಲಹೆಯನ್ನು ನೀಡುತ್ತಾನೆ ಎಂದು ನಾನು ದೃಢವಾಗಿ ಹೇಳುತ್ತೇನೆ” ಎಂದು ಅವರು ಹೇಳಿದ್ದಾರೆ.

https://twitter.com/i/status/1752242524926660689

ರಾಮು ಸ್ವಯಂಪ್ರೇರಿತವಾಗಿ ಕಾರ್ಯಗಳನ್ನು ನಿರ್ವಹಿಸುವುದು, ತಾನೇ ಖುದ್ದಾಗಿ ಗಾಡಿಯನ್ನು ಸಾಗಿಸುವ, ಗೋಶಾಲೆಯ ಸುತ್ತಲೂ ಗಾಡಿಯನ್ನು ತಿರುಗಿಸುವ ಮತ್ತು ಯಾರ ಮಾರ್ಗದರ್ಶನವಿಲ್ಲದೆಯೂ ಸರಕುಗಳನ್ನು ನಿಖರವಾಗಿ ಗಮ್ಯಸ್ಥಳಕ್ಕೆ ತಲುಪಿಸುವ ದೃಶ್ಯಾವಳಿಗಳು ವೀಡಿಯೋದಲ್ಲಿದ್ದು ಇದಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಯಾವ ಸರಕುಗಳನ್ನು ಯಾವ ಸ್ಥಳದಲ್ಲಿ ಇಡಬೇಕೆಂಬುದು ರಾಮುವಿಗೆ ತಿಳಿದಿದ್ದು, ಈ ಸ್ವಾವಲಂಬನೆಯ ಅಸಾಧಾರಣ ಪ್ರದರ್ಶನವು ವೀಕ್ಷಕರನ್ನು ಆಕರ್ಷಿಸಿದೆ.

ವೀಡಿಯೊ ಬಿಡುಗಡೆಯಾದ ಕೇವಲ ಒಂದೆರಡು ಗಂಟೆಗಳಲ್ಲಿ 187.8K ವೀಕ್ಷಣೆಗಳನ್ನು ಪಡೆದಿದೆ. ಪಂಜಾಬಿನ ಲೂಧಿಯಾನದಲ್ಲಿರುವ ಅಸಾರಾಂ ಬಾಪು ಅವರ ಆಶ್ರಮದಲ್ಲಿ ರಾಮು ನಿತ್ಯವೂ ತನ್ನ ಕಾಯಕದಲ್ಲಿ ತೊಡಗಿದ್ದು, ಜನರು ಭೇಟಿ ನೀಡಬಹುದು ಮತ್ತು ಅದರ ಅದ್ಭುತ ಕೌಶಲ್ಯಗಳನ್ನು ನೋಡಬಹುದು ಎಂದು ವೀಡಿಯೊದ ನಿರೂಪಕರು ಹೇಳುತ್ತಾರೆ.