ಭಾರತೀಯ ವೈದ್ಯಕೀಯ ಕ್ಷೇತ್ರದ ಪ್ರಮುಖ ಮೈಲಿಗಲ್ಲು ಮತ್ತು ಪ್ರಗತಿಗಳ ಅವಲೋಕನ

ಭಾರತದ ವೈದ್ಯಕೀಯ ಕ್ಷೇತ್ರವು ಪ್ರಾಚೀನ ಕಾಲದಿಂದ ಆಧುನಿಕ ಯುಗಕ್ಕೆ ಗಮನಾರ್ಹವಾದ ಅಭಿವೃದ್ಧಿ ಮತ್ತು ರೂಪಾಂತರಕ್ಕೆ ಸಾಕ್ಷಿಯಾಗಿದೆ.
ಇತಿಹಾಸದಿಂದಕ್ಕೂ ಭಾರತೀಯ ವೈದ್ಯಕೀಯ ಕ್ಷೇತ್ರದ ಪ್ರಮುಖ ಮೈಲಿಗಲ್ಲುಗಳು ಮತ್ತು ಪ್ರಗತಿಗಳ ಅವಲೋಕನ:
ಪ್ರಾಚೀನ ಭಾರತೀಯ ಔಷಧ ಪದ್ಧತಿ ಆಯುರ್ವೇದ. ಅಂದರೆ ಜೀವನದ ವಿಜ್ಞಾನ. ಇಲ್ಲಿ ಗಿಡಮೂಲಿಕೆಗಳ ಪರಿಹಾರಗಳು ಆಹಾರ ಮಾರ್ಗಸೂಚಿಗಳು ಮತ್ತು ಯೋಗಧ್ಯಾನದ ಮೂಲಕ ದೇಹ ಮತ್ತು ಆತ್ಮದ ಸಮತೋಲನವನ್ನು ಒತ್ತಿ ಹೇಳಿದೆ.

ಶಾಸ್ತ್ರೀಯ ಭಾರತೀಯ ವೈದ್ಯ ಪದ್ಧತಿ: ಚರಕ ಸಂಹಿತೆ ಚರಕನು ಬರೆದ ಪ್ರಾಚೀನ ಪಠ್ಯವು ವಿವಿಧ ರೋಗಗಳು ಅವುಗಳ ಕಾರಣಗಳು ಲಕ್ಷಣಗಳು ಮತ್ತು ಚಿಕಿತ್ಸೆಗಳ ಬಗ್ಗೆ ವಿವರವಾದ ಅಳ ನೋಟಗಳನ್ನು ಒದಗಿಸುತ್ತದೆ. ಹಾಗೆ ಇನ್ನೊಂದು ಸುಶ್ರುತರಿಂದ ಸಂಯೋಜಿಸಲ್ಪಟ್ಟ ಸುಶ್ರುತ ಸಂಹಿತೆ. ಈ ಪಠ್ಯವು ಪ್ಲಾಸ್ಟಿಕ್ ಸರ್ಜರಿ ಮತ್ತು ವಿವಿಧ ಶಸ್ತ್ರಚಿಕಿತ್ಸಾ ಉಪಕರಣಗಳ ಬಳಕೆ ಸೇರಿದಂತೆ ಶಸ್ತ್ರಚಿಕಿತ್ಸಾ ತಂತ್ರಗಳ ಮೇಲೆ ಕೇಂದ್ರೀಕರಿಸಿದೆ.


ಮಧ್ಯ ಕಾಲಿನ ಭಾರತೀಯ ಔಷದ ಅಥವಾ ಯೂನಾನಿ ಮೆಡಿಸನ್ ಇದು ಪರ್ಷಿಯನ್ ಮತ್ತು ಅರಬ್ ವೈದ್ಯರಿಂದ ಪರಿಚಯಿಸಲ್ಪಟ್ಟ ಈ ರೀತಿಯು ಸಾಂಪ್ರದಾಯಿಕ ಭಾರತೀಯ ಮತ್ತು ಇಸ್ಲಾಮಿಕ್ ವೈದ್ಯ ಪದ್ಧತಿ. ನಂತರ ಪರಿಚಯಗೊಂಡ ಔಷಧ ಪದ್ಧತಿ ಎಂದರೆ ಪಾಶ್ಚಾತ್ಯ ಔಷಧೀಯ ಪದ್ಧತಿ ಇದು ಯುರೋಪಿಯನ್ ಪದ್ದತಿಯನ್ನು ಅನುಸರಿಸುತ್ತದೆ. ಈ ಕಾಲದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳು ಸ್ಥಾಪನೆ ಆಯಿತು.


ಸ್ವಾತಂತ್ರ್ಯ ನಂತರ ವೈದ್ಯಕೀಯ ಮಂಡಳಿಗಳ ಸ್ಥಾಪನೆಯಾಯಿತು ಶಿಕ್ಷಣ ಮತ್ತು ವೃತ್ತಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಡಾಕ್ಟರ್ ಬಿಧಾನ್ ಚಂದ್ರ ರಾಯ್ ಸಾರ್ವಜನಿಕ ಆರೋಗ್ಯಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದರು. ಹಲವಾರು ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಭಾರತೀಯ ವೈದ್ಯಕೀಯ ಕ್ಷೇತ್ರ ಪ್ರಗತಿಯತ್ತ ದಾಪುಗಾಲಿಡುತ್ತಿದೆ. ಭಾರತದಲ್ಲಿನ ಔಷಧೀಯ ಉದ್ಯಮ ವಿಶ್ವದಾದ್ಯಂತ ಜನರಿಕ್ ಔಷಧಿಗಳ ಅತಿ ದೊಡ್ಡ ಉತ್ಪಾದಕರಲ್ಲಿ ಒಂದಾಗಿದೆ. ಗ್ರಾಮೀಣ ಪ್ರದೇಶಗಳಲ್ಲೂ ಸಹ ವೈದ್ಯಕೀಯ ಮೂಲ ಸೌಕರ್ಯಗಳು ಸಿಗುವಂತಾಗಿದೆ.


ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ವೈದ್ಯರು ದೇವರಿಗೆ ಸಮಾನ ಎಂದು ಭಾರತೀಯರು ನಂಬುತ್ತಾರೆ. ಸಮಾಜದ ಆರೋಗ್ಯ ಕಾಪಾಡುವಲ್ಲಿ ವೈದ್ಯರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬುದು ಹಲವು ಬಾರಿ ಸಾಬೀತಾಗಿದೆ. ಪ್ಲೇಗ್ ಮತ್ತು ಕೋವಿಡ್ 19 ಸಮಯದಲ್ಲಿ ಜೀವದ ಹಂಗು ತೊರೆದು ಮನೆ ಕುಟುಂಬದವರನ್ನು ತೊರೆದು ಆಸ್ಪತ್ರೆಗಳಲ್ಲಿ ತಿಂಗಳುಗಟ್ಟಲೆ ಕೆಲಸ ಮಾಡುತ್ತಾ ಜನಸೇವೆ ಜನಾರ್ಧನ ಸೇವೆ ಎಂಬುದನ್ನು ನಿರೂಪಿಸಿದ್ದಾರೆ. ಅಂತಹ ವೈದ್ಯರಿಗೆ ಗೌರವ ನೀಡಲು ಪ್ರತಿ ವರ್ಷ ಜುಲೈ 1 ರಂದು ಡಾ. ಬಿಧಾನ್ ಚಂದ್ರ ರಾಯ್ ಅವರ ಸವಿನೆನಪಿನಲ್ಲಿ ಭಾರತದಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸುತ್ತಾರೆ.


ಹಗಲಿರುಳೆನ್ನದೆ ವೈಯಕ್ತಿಕ ಕಾಳಜಿವಹಿಸಿ 45 ದಿನಗಳ ನಿರಂತರ ಹೋರಾಟದ ನಂತರ ನನ್ನ ತಂದೆಗೆ ಮರಳಿ ಜೀವ ಮತ್ತು ಜೀವನವನ್ನು ಕರುಣಿಸಿ ನಮ್ಮ ಬದುಕಿನಲ್ಲಿ ನಿಜವಾದ ವೈದ್ಯೋ ನಾರಾಯಣೋ ಹರಿ ಎಂಬ ಮಾತಿಗೆ ಅನ್ವರ್ಥ ರಾದ ಡಾಕ್ಟರ್ ರೋಹಿತ್ ಪಿಂಟೋ ಮಂಗಳೂರು, ಇವರನ್ನು ಈ ಸಾರ್ಥಕ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ ಅವರ ಸೇವಾ ಬದ್ಧತೆ ಹಾಗೂ ವಿನಯ ಪೂರ್ವಕ ನಡವಳಿಕೆ ಹಾಗೂ ರೋಗಿಗಳ ಬಗ್ಗೆ ಹಗಲಿರುಳೆನ್ನದೆ ಅವರ ಕಾಳಜಿಗೆ ಅವರನ್ನು ಮನಃಪೂರ್ವಕವಾಗಿ ಅಭಿನಂದಿಸುತ್ತೇನೆ. ಅವರಂತಹ ವೈದ್ಯರು ಈ ಕ್ಷೇತ್ರಕ್ಕೆ ಭೂಷಣ ಹಾಗೂ ಕಳಶ ಪ್ರಾಯ.

ಚಿನ್ಮಯೀ ಹೆಬ್ಬಾರ್
ಭಂಡಾರ್ಕರ್ ಕಾಲೇಜು, ಕುಂದಾಪುರ