ಮಣಿಪಾಲದ MSDC ಯಿಂದ ಡ್ರೋನ್ ಪೈಲಟ್ ಆಗುವ ಅದ್ಬುತ ಅವಕಾಶ: DGCA ಅನುಮೋದಿತ ತರಬೇತಿ ಪಡೆಯಿರಿ ವೃತ್ತಿಪರ ಡ್ರೋನ್ ಪೈಲೆಟ್ ಆಗಿರಿ

ಮಣಿಪಾಲ: ಡ್ರೋನ್ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ (MSDC) ವಿಶೇಷ ಅವಕಾಶ ಕಲ್ಪಿಸಿದೆ. ಕೇಂದ್ರದ ವತಿಯಿಂದ ಡಿಜಿಸಿಎ (DGCA) ಅನುಮೋದಿತ ರಿಮೋಟ್ ಪೈಲಟ್ ತರಬೇತಿ ಕೋರ್ಸ್‌ನ್ನು ಆಯೋಜಿಸಲಾಗಿದ್ದು, ತರಬೇತಿ ಪಡೆಯುವವರಿಗೆ ಪ್ರಮಾಣೀಕೃತ ಡ್ರೋನ್ ಪೈಲಟ್ ಆಗುವ ಅವಕಾಶ ದೊರೆಯಲಿದೆ.

5ರಿಂದ 6 ದಿನಗಳ ಈ ತೀವ್ರ ತರಬೇತಿಯಲ್ಲಿ ಅಭ್ಯರ್ಥಿಗಳಿಗೆ ನೈಜ ಡ್ರೋನ್ ಹಾರಾಟದ ಅನುಭವದ ಜೊತೆಗೆ ಫ್ಲೈಟ್ ಸಿಮ್ಯುಲೇಶನ್ ತರಬೇತಿ ನೀಡಲಾಗುತ್ತದೆ. ಅಲ್ಲದೆ, ಡಿಜಿಸಿಎ ನಿಯಮಗಳು ಮತ್ತು ಮಾರ್ಗಸೂಚಿಗಳು, ಡ್ರೋನ್ ಕಾರ್ಯಾಚರಣೆಯ ಪ್ರಾಯೋಗಿಕ ಅಂಶಗಳು ಹಾಗೂ ಉದ್ಯಮಕ್ಕೆ ಅಗತ್ಯವಿರುವ ಕೌಶಲ್ಯಗಳ ಕುರಿತು ತರಬೇತಿ ನೀಡಲಾಗುತ್ತದೆ. 2ರಿಂದ 25 ಕೆ.ಜಿ. ತೂಕದ ಸಣ್ಣ ವರ್ಗದ ಡ್ರೋನ್‌ಗಳನ್ನು ನಿರ್ವಹಿಸುವ ಕುರಿತು ಪ್ರಾಯೋಗಿಕ ತರಬೇತಿಯೂ ಇರಲಿದೆ.

ಅನುಭವಿ ತಜ್ಞರ ಮಾರ್ಗದರ್ಶನದಲ್ಲಿ ನಡೆಯುವ ತರಬೇತಿಯ ಮೂಲಕ ಅಭ್ಯರ್ಥಿಗಳಿಗೆ Solo Flying Experience ಸೇರಿದಂತೆ ಉದ್ಯಮಕ್ಕೆ ಅಗತ್ಯವಿರುವ ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಅವಕಾಶ ಸಿಗಲಿದೆ. ಡ್ರೋನ್ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಉದ್ಯೋಗಾವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಈ ತರಬೇತಿ ರೂಪಿಸಲಾಗಿದೆ.

ತರಬೇತಿ ಪೂರ್ಣಗೊಳಿಸಿದ ಬಳಿಕ ಡ್ರೋನ್ ಪೈಲಟ್, ಏರಿಯಲ್ ಸರ್ವೇ ಮತ್ತು ಮ್ಯಾಪಿಂಗ್, ಕೃಷಿ ಡ್ರೋನ್ ಆಪರೇಟರ್, ಸಿನಿಮಾಟೋಗ್ರಫಿ ಮತ್ತು ಫೋಟೋಗ್ರಫಿ, ಇನ್‌ಸ್ಪೆಕ್ಷನ್ ಹಾಗೂ ಮೂಲಸೌಕರ್ಯಗಳ ಮೇಲ್ವಿಚಾರಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಹುಡುಕಬಹುದು. ಮುಂದಿನ ದಿನಗಳಲ್ಲಿ ಡ್ರೋನ್ ಡೆಲಿವರಿ ಸೇರಿದಂತೆ ಹಲವು ಹೊಸ ಕ್ಷೇತ್ರಗಳಲ್ಲಿಯೂ ಅವಕಾಶಗಳು ಹೆಚ್ಚುವ ನಿರೀಕ್ಷೆಯಿದೆ.

ಈ ಕೋರ್ಸ್‌ನ ಮೂಲ ಶುಲ್ಕ ₹30,000 ಹಾಗೂ ಶೇ.18 ಜಿಎಸ್‌ಟಿ ಆಗಿದ್ದು, ಹಬ್ಬದ ಪ್ರಯುಕ್ತ ಮೂಲ ಶುಲ್ಕದ ಮೇಲೆ ಶೇ.40ರಷ್ಟು ವಿಶೇಷ ರಿಯಾಯಿತಿ ಘೋಷಿಸಲಾಗಿದೆ. ಸೀಟುಗಳು ಸೀಮಿತವಾಗಿರುವುದರಿಂದ ಆಸಕ್ತ ಅಭ್ಯರ್ಥಿಗಳು ಶೀಘ್ರವಾಗಿ ನೋಂದಣಿ ಮಾಡಿಕೊಳ್ಳುವಂತೆ MSDC ತಿಳಿಸಿದೆ.

ಮಣಿಪಾಲ್‌ನ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕ್ಯಾಂಪಸ್‌ನಲ್ಲಿರುವ MSDCಯಲ್ಲಿ ತರಬೇತಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 81231 65069 ಸಂಖ್ಯೆಗೆ ಸಂಪರ್ಕಿಸಬಹುದು. msdcskills.org ವೆಬ್‌ಸೈಟ್ ಅಥವಾ [email protected] ಇ-ಮೇಲ್ ಮೂಲಕವೂ ವಿವರಗಳನ್ನು ಪಡೆಯಬಹುದು.