ಉಡುಪಿXPRESS- “ಅಮ್ಮ with ಕಂದಮ್ಮ” ಫೋಟೋ ಸ್ಪರ್ಧೆ: ನಿಮ್ ಚಂದದ ಫೋಟೋಗೆ ನಾವ್ ಕೊಡ್ತೇವೆ ಬಹುಮಾನ

ಪುಟ್ಟ ಪುಟ್ಟಿಯರು ಸಂಭ್ರಮಪಟ್ಟು, ಕೇಕೆ ಹಾಕಿ ನಗುವ ಮಕ್ಕಳ ದಿನಾಚರಣೆಗೆ ಇನ್ನೇನು ಕೆಲವೇ ದಿನ ಬಾಕಿ. ಆಗಾಗ ಹೊಸ ಹೊಸ contest ಗಳನ್ನು ಆಯೋಜಿಸುವ ಕರಾವಳಿಯ ವೇಗದ ಸುದ್ದಿ ಜಾಲತಾಣ ಉಡುಪಿXPRESS, ಮಕ್ಕಳ ದಿನಾಚರಣೆ ಪ್ರಯುಕ್ತ “ಅಮ್ಮ with ಕಂದಮ್ಮ” ಅನ್ನೋ ಚಂದದ ಫೋಟೋ ಸ್ಪರ್ಧೆ ಆಯೋಜಿಸಿದೆ.

ಏನ್ ಸ್ಪರ್ಧೆ?

ತನ್ನ ಕಂದನ ಜೊತೆ ಅಮ್ಮನೂ ಫೋಟೋದಲ್ಲಿ ಮಿಂಚುವ ಸ್ಪರ್ಧೆಯಿದು. ಅಮ್ಮಂದಿರು ತಮ್ಮ ಕಂದಮ್ಮ ನ ಜೊತೆ ಮುದ್ದಾದ ಫೋಟೋ ಸೆರೆಹಿಡಿದು ಸ್ಪರ್ಧೆಗೆ ಕಳಿಸಬೇಕು. ಆಯ್ಕೆಯಾದ ಮೋಹಕ‌ ಅಮ್ಮ-ಮಗುವಿಗೆ ಬಹುಮಾನ ನಾವ್ ಕೊಡ್ತೇವೆ.

ನಿಯಮಗಳೇನು?

 *ಸ್ಪರ್ಧೆಯಲ್ಲಿ 6 ವರ್ಷದೊಳಗಿನ ಮಕ್ಕಳ ಜೊತೆ ಅಮ್ಮಂದಿರು ಭಾಗವಹಿಸಬಹುದು.
*ಪೋಟೋದಲ್ಲಿ ಅಮ್ಮ-ಮಗು ಮಾತ್ರವಿರಬೇಕು ಮಗುವಿನ ಸಿಂಗಲ್ ಫೋಟೋ, ಫ್ಯಾಮಿಲಿ ಫೋಟೋ ಸ್ಪರ್ಧೆಗೆ ಪರಿಗಣಿಸುವುದಿಲ್ಲ.
*ಸೆಲ್ಫಿ ಫೋಟೋಗಳು ಬೇಡ.

ನೀವೇನ್ ಮಾಡ್ಬೇಕು?

ನಮ್ಮ ಫೇಸ್ ಬುಕ್ ಪೇಜ್ Udupixpress.com ಗೆ ಲೈಕ್ ಮಾಡಿ, ನಿಮ್ಮ ಫೋಟೋಗಳನ್ನು Udupixpress.com ಫೇಸ್ಬುಕ್ ಪೇಜ್ ನ ವಾಲ್ ನಲ್ಲಿ ಅಮ್ಮ ಮತ್ತು ಮಗುವಿನ ಹೆಸರು ಮತ್ತು ಊರು ಬರೆದು ಫೋಸ್ಟ್ ಮಾಡಬೇಕು.
*ಆ ಫೋಸ್ಟ್ ಅನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ಅತೀ ಹೆಚ್ಚು ಲೈಕ್ ಪಡೆದ ಫೋಟೋಗಳಿಗೆ ಅವುಗಳ ಗುಣಮಟ್ಟ,ಸಹಜತೆ ಆಧರಿಸಿ ಬಹುಮಾನ ನೀಡಲಾಗುವುದು.ಈ ವಿಷಯದಲ್ಲಿ ತೀರ್ಪುಗಾರರ  ತೀರ್ಮಾನ ಅಂತಿಮ
ದಿನಾಂಕ 3.11.2019- 12.11.2019 ರ ವರೆಗೆ  ಫೋಟೋಗಳ ಲೈಕ್ ನ್ನು ಗಣನೆಗೆ ತೆಗೆದುಕೊಳ್ಳಲಾಗುವುದು.

ಹೆಚ್ಚಿನ ಮಾಹಿತಿಗೆ :9591650840, 7483419099