ಕಾರ್ಕಳ: ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ) ಇದರ ವತಿಯಿಂದ 55 ನೇ ಸೇವಾ ಯೋಜನೆಯಾಗಿ ಆಂಬ್ಯುಲೆನ್ಸ್ ಲೋಕಾರ್ಪಣೆ ಮತ್ತು ಸನ್ಮಾನ ಕಾರ್ಯಕ್ರಮವು ಬೈಲೂರು ಶ್ರೀ ಮಾರಿಯಮ್ಮ ಸಭಾಭವನದಲ್ಲಿ ಡಿ.24 ರಂದು ಬೆಳಿಗ್ಗೆ 11 ಗಂಟೆಯಿಂದ ನಡೆಯಲಿದೆ.

ಆಂಬ್ಯುಲೆನ್ಸ್ ಅನ್ನು ಶಾಸಕ ವಿ.ಸುನಿಲ್ ಕುಮಾರ್ ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಬಳಗದ ಅಧ್ಯಕ್ಷ ಹಾಗೂ ವಕೀಲ ಸದಾನಂದ ಸಾಲಿಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಂಬೈ ವಕೀಲ ಭೋಜ ನಾರಾಯಣ ಪೂಜಾರಿ, ಉದ್ಯಮಿ ಕೃಷ್ಣರಾಜ್ ಹೆಗ್ಡೆ, ಬಳಗದ ಸಲಹೆಗಾರ ಸುಮಿತ್ ಶೆಟ್ಟಿ ಕೌಡೂರು, ಕೆರ್ವಾಶೆ ತಾಲೂಕು ವಿಪತ್ತು ನಿರ್ವಹಣಾ ಘಟಕದ ಸದಾನಂದ ಸಾಲಿಯಾನ್, ಉದ್ಯಮಿ ಪ್ರಶಾಂತ್ ಶೆಟ್ಟಿ, ನಿವೃತ್ತ ಸಿಎ ಕೆ.ಕಮಲಾಕ್ಷ ಕಾಮತ್, ಧ.ಗ್ರಾ.ಯೋ.ಬಿಸಿ ಟ್ರಸ್ಟ್ ಮೇಲ್ವಿಚಾರಕಿ ಸೌಮ್ಯ ಶೆಟ್ಟಿ, ಬಳಗದ ಸ್ಥಾಪಕ ಸದಸ್ಯ ದುಬೈ ಪ್ರಕಾಶ್ ಎಲ್ ಶೆಟ್ಟಿಗಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆರೂರು ನರ್ಸಿಂಗ್ ಹೋಮ್ ಇದರ ವೈದ್ಯ ಡಾ.ಎಂ.ಬಿ.ಆಚಾರ್ಯ ಇವರ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಡಿ.27 ರಂದು ಅದೃಷ್ಟ ಚೀಟಿ ಡ್ರಾ ನಡೆಯಲಿದೆ.












