ಕಲಿಯುಗದ ಕರ್ಣ,ರೆಬೆಲ್ ಸ್ಟಾರ್ ದಿ|ಅಂಬರೀಶ್ ಹಾಗೂ ರಾಷ್ಟ್ರೀಯ ಕ್ರೀಡಾಪಟು ದಿ|ಅಯ್ಯ ಸ್ಮರಣಾರ್ಥ ಶ್ರೀ ಮಹದೇಶ್ವರ ಕ್ರೀಡಾ ಸಂಸ್ಥೆಯು(S.M.C.C) ಮೈಸೂರಿನ ಕುಂಬಾರಕೊಪ್ಪಲಿನ ಕೆಂಪೇ ಗೌಡ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ 2 ದಿನಗಳ ಹಗಲಿನ ರಾಷ್ಟ್ರೀಯ ಮಟ್ಟದ ವ್ಯವಸ್ಥಿತ ಪಂದ್ಯಾಕೂಟ ಅಂಬಿ-ಅಯ್ಯ ಕಪ್ 2019 ಪ್ರಶಸ್ತಿಯನ್ನು ಬೆಂಗಳೂರಿನ ಮೈಟಿ ತಂಡದ ಆಟಗಾರರನ್ನೊಳಗೊಂಡ ಮೈಟಿ ಮೈಸೂರು ಸ್ಟಾರ್ಸ್ ತಂಡ ಜಯಿಸಿತು.
ರಾಜ್ಯದ ವಿವಿಧೆಡೆಯದ 17 ತಂಡಗಳು ಸ್ಪರ್ಧಿಸಿದ್ದ ಈ ಪಂದ್ಯಾಕೂಟದಲ್ಲಿ ಲೀಗ್ ಹಂತದ ಹಣಾಹಣಿಗಳ ಬಳಿಕ ಮೈಟಿ ತಂಡ ಯುವ ಬೆಂಗಳೂರು ಹಾಗೂ ಮೂನ್ ಸ್ಟಾರ್ ಎಸ್.ಝಡ್.ಸಿ.ಸಿ ತಂಡ ಬಲಿಷ್ಠ ಫ್ರೆಂಡ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದವು.
ಫೈನಲ್ ನಲ್ಲಿ ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡ ಮೈಟಿ ತಂಡ ,ಮೂನ್ ಸ್ಟಾರ್ಸ್
(ಎಸ್.ಝಡ್.ಸಿ.ಸಿ)ಯನ್ನು 7 ಓವರ್ ಗಳಲ್ಲಿ 40 ರನ್ ಗಳಿಗೆ ನಿಯಂತ್ರಿಸಿತ್ತು.ಸ್ಪರ್ಧಾತ್ಮಕ ಗುರಿಯನ್ನು
ಬೆಂಬತ್ತಿದ ಮೈಟಿ ಶಾಬುದ್ದೀನ್ ಹಾಗೂ ಫೈಸಲ್ ಬ್ಯಾಟಿಂಗ್ ಸಾಹಸದಿಂದ ಕೇವಲ 3.5 ಓವರ್ ಗಳಲ್ಲಿ ಗುರಿಯನ್ನು ಬೆಂಬತ್ತಿದರು.
ವಿಜೇತ ತಂಡ 2 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿ ಪಡೆದರೆ,ರನ್ನರ್ಸ್ ತಂಡ 1 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಯನ್ನು ಪಡೆದು ಕೊಂಡರು.ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಹಾಗೂ ಪಂದ್ಯಾಕೂಟದ ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಮೈಟಿಯ ಜಹೀರ್ ಪಡೆದರೆ,ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿ ಮೈಟಿಯ ಸಲೀಂ,
ಬೆಸ್ಟ್ ಕೀಪರ್ ಎಸ್.ಝಡ್.ಸಿ.ಸಿ ಚರಣ್,ಟೂರ್ನಿಯುದ್ದಕ್ಕೂ ಅತ್ಯುತ್ತಮ ನಿರ್ವಹಣೆ ತೋರಿದ ಎಸ್.ಝಡ್.ಸಿ.ಸಿ ಯ ಕಿಝರ್ ಪಡೆದುಕೊಂಡರು.ಗಣ್ಯಾತಿಗಣ್ಯರ ಸಮ್ಮುಖದಲ್ಲಿ ವಿಜೇತರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಈ ಪಂದ್ಯಾಕೂಟದ ನೇರ ಪ್ರಸಾರವನ್ನು ಸಚಿನ್ ಮಹಾದೇವ್ ನೇತೃತ್ವದ M.Sports ಯೂ ಟ್ಯೂಬ್ ಚಾನೆಲ್ ಬಿತ್ತರಿಸಿತ್ತು.
– ಕೋಟ ರಾಮಕೃಷ್ಣ ಆಚಾರ್ಯ