ಅಂಬಲಪಾಡಿ: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬುಧವಾರ ನಡೆದ ಗ್ರಾಮ ಪಂಚಾಯತ್ ಚುನಾವಣೆ ಸಮಾಲೋಚನಾ ಸಭೆಯಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಅಂಬಲಪಾಡಿ ಗ್ರಾಪಂ ವ್ಯಾಪ್ತಿಯ ಪೂಜಾರಿ ಅಂಬಲಪಾಡಿ ಸದಾನಂದ ಕಾಂಚನ್ ಬಂಕರ್‍ಕಟ್ಟೆ, ದಾಮೋದರ್ ಕುಂದರ್, ದಯಾನಂದ ಪೂಜಾರಿ, ಕರುಣಾಕರ್, ಚಂದ್ರಶೇಖರ್ ಇವರ ನೇತೃತ್ವದಲ್ಲಿ ಸಾಯಿನಾಥ್ ಕೋಟ್ಯಾನ್, ನವೀನ್ ಸುವರ್ಣ, ಶ್ರೀಧರ್, ಗಣೇಶ್ ಪೂಜಾರಿ, ಅಶೋಕ್ ಆಚಾರ್ಯ, ಪ್ರಶಾಂತ್ ಕುಂದರ್, ವಿವೇಕಾನಂದ, ರಾಜೇಶ್ ಆಚಾರ್ಯ, ವಿನ್ಯಾಸ, ವಿನುತ್, ಪ್ರಜ್ವಲ್, ಪ್ರಸನ್ನ, ಉಜ್ವಲ್ ಕುಂದರ್, ಅಜಯ್ ಮೊದಲಾದವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಹಾಗೂ ಮಾಜಿ ಸಚಿವ ಪ್ರಮೋದ್ ಮಧ್ವರಾಜ್‍ ಅವರು ಸಚಿವರಾಗಿದ್ದಾಗ ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ಪಕ್ಷಕ್ಕೆ ಸೇರ್ಪಡೆಯಾದರು.

ಪ್ರಮೋದ್ ಮಧ್ವರಾಜ್ ಅವರು ಕಾಂಗ್ರೆಸ್ ಧ್ವಜವನ್ನು ನೀಡಿ ಯುವಕರನ್ನು ಪಕ್ಷಕ್ಕೆ ಬರಮಾಡಿಕೊಂಡರು.