ಅಪ್ಪು ಅಭಿನಯದ ಕೊನೆಯ ಸಿನಿಮಾ ‘ಜೇಮ್ಸ್’ ಟೀಸರ್ ರಿಲೀಸ್ ಆಗಿದ್ದು, ಟೀಸರ್ ಬಿಡುಗಡೆಯಾದ 24 ಗಂಟೆಗಳಲ್ಲಿ ‘ಜೇಮ್ಸ್’ ಟೀಸರ್ ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ.
ಪುನೀತ್ ಅಭಿಮಾನಿಗಳು ‘ಜೇಮ್ಸ್’ ಟೀಸರ್ ನೋಡಿ ಮತ್ತೆ ಭಾವುಕರಾಗಿದ್ದು, ಕೆಲವು ಟೀಸರ್ ಮೆಚ್ಚಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲೂ ‘ಜೇಮ್ಸ್’ ಟೀಸರ್ ಟ್ರೆಂಡಿಂಗ್ನಲ್ಲಿದೆ.
ಈ ಟೀಸರ್ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಎಂಟ್ರಿ, ಆಕ್ಷನ್, ಮ್ಯಾನರಿಸಂ, ಸ್ಟೈಲ್ ಎಲ್ಲವನ್ನೂ ಪ್ರೇಕ್ಷಕರು ಕಣ್ತುಂಬಿ ಹರ್ಷ ವ್ಯಕ್ತಪಡಿಸಿದ್ದಾರೆ.
ಅಪ್ಪು ಅಭಿನಯದ ಜೇಮ್ಸ್ ಟೀಸರ್ 1 ಕೋಟಿ ಅಧಿಕ ವೀಕ್ಷಣೆ:
‘ಜೇಮ್ಸ್’ ಟೀಸರ್ 24 ಗಂಟೆಗಳಲ್ಲಿ ಎರಡು ಹೊಸ ದಾಖಲೆಗಳನ್ನು ಬರೆದಿದೆ. ಒಂದು ದಿನದೊಳಗೆ ಟೀಸರ್ಗೆ 1 ಕೋಟಿ ಅಧಿಕ ವೀವ್ಸ್ ಸಿಕ್ಕಿದ್ದಲ್ಲದೆ 5 ಲಕ್ಷದ 30 ಸಾವಿರ ಅಧಿಕ ಮಂದಿ ಟೀಸರ್ ಲೈಕ್ ಮಾಡಿದ್ದಾರೆ. ಕನ್ನಡದ ಯಾವುದೇ ಟೀಸರ್ಗೂ ಈ ಮಟ್ಟಿಗಿನ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಒಂದೊಂದು ದಾಖಲೆಗಳನ್ನು ಅಳಿಸಿ ಹಾಕುತ್ತಿದೆ.
ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ ‘ಜೇಮ್ಸ್’ಗೆ ಸಖತ್ ರೆಸ್ಪಾನ್ಸ್:
ಚೇತನ್ಕುಮಾರ್ ನಿರ್ದೇಶನದ ಮಾಡಿರುವ ‘ಜೇಮ್ಸ್’ ಟೀಸರ್ ಕನ್ನಡ ಸೇರಿದಂತೆ ಐದು ಭಾಷೆಗಳಾದ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ರಿಲೀಸ್ ಆಗಿದ್ದು, ಎಲ್ಲಾ ಭಾಷೆಯಲ್ಲೂ ಸಿನಿಮಾಗೆ ಅದ್ಬುತ ರೆಸ್ಪಾನ್ಸ್ ದೊರಕಿದೆ.