ಜಮ್ಮು: ಶ್ರೀ ಅಮರನಾಥ ದೇವಾಲಯ ಮಂಡಳಿಯು ಈ ವರ್ಷ ಹಿಮಾಲಯದ ಗುಹಾ ದೇಗುಲಕ್ಕೆ ಬರಲು ಸಾಧ್ಯವಾಗದ ಭಕ್ತರಿಗೆ ಆನ್‌ಲೈನ್ ಪೂಜೆ, ಹವನ ಮತ್ತು ಪ್ರಸಾದ ಸೇವೆಗಳನ್ನು ಘೋಷಿಸಿದೆ. ಆನ್‌ಲೈನ್ ಸೇವೆಗಳನ್ನು ತನ್ನ www.shriamarnathjishrine.com ವೆಬ್‌ಸೈಟ್ ಅಥವಾ ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದಾದ ಅದರ ಮೊಬೈಲ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಬಹುದು ಆಡಳಿತ ಮಂಡಳಿ ತಿಳಿಸಿದೆ. ಪೂಜೆಗೆ 1,100 ರೂ ನಿಗದಿಪಡಿಸಲಾಗಿದೆ.
ಭಕ್ತಾದಿಗಳ ಹೆಸರಿನಲ್ಲಿ ಪುರೋಹಿತರು ಪೂಜೆ ಮತ್ತು ಹವನಗಳನ್ನು ನಡೆಸುತ್ತಾರೆ ಮತ್ತು ಭಕ್ತರು ಆನ್‌ಲೈನ್ ಮೂಲಕ ಪೂಜೆಯಲ್ಲಿ ಭಾಗವಹಿಸಬಹುದು, ಭಕ್ತಾದಿಗಳ ಮನೆ ಬಾಗಿಲಿಗೆ ಪ್ರಸಾದ ವಿತರಿಸಲಾಗುವುದು. ಒಮ್ಮೆ ಬುಕಿಂಗ್ ಮಾಡಿದ ನಂತರ, ದೇಗುಲ ಮಂಡಳಿಯು ಭಕ್ತರ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಐಡಿ ಲಿಂಕ್ ಗೆ ಪೂಜಾ ದಿನಾಂಕ ಮತ್ತು ಸಮಯವನ್ನು ಕಳುಹಿಸಲಿದೆ ಎಂದು ದೇಗುಲ ಮಂಡಳಿ ಸಿಇಒ ನಿತೀಶ್ವರ್ ಕುಮಾರ್ ತಿಳಿಸಿದ್ದಾರೆ.