ಆಳ್ವಾಸ್ ಕಂಪ್ಯೂಟರ್ ಸೈನ್ಸ್ ವಿಭಾಗ:ಬಿ.ಸಿ.ಎ ಪೆಸ್ಟ್ ”ಇಗ್‌ನಿಟ್ರಾ ಉದ್ಘಾಟನೆ

ಮೂಡುಬಿದಿರೆ: ಪ್ರಸ್ತುತ ಕಾಲಘಟ್ಟದಲ್ಲಿ ತಂತ್ರಜ್ಞಾನ ಬಹಳಷ್ಟು ವೇಗವಾಗಿ ಬೆಳವಣಿಗೆ ಯಾಗುತ್ತಿದೆ. ಆದ್ದರಿಂದ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳು ಇದಕ್ಕೆ ಹೊಂದಿಕೊಳ್ಳಬೇಕು ಎಂದು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್ ಕೊಠಾರಿ ಹೇಳಿದರು.

ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ಆಯೋಜಿಸಲಾದ ಬಿ.ಸಿ.ಎ ಪೆಸ್ಟ್ ”ಇಗ್‌ನಿಟ್ರಾ ೨ಕೆ೨೦’ಯನ್ನು ಉದ್ಘಾಟಿಸಿ ಮಾತನಾಡಿದರು.

ತಂತ್ರಜ್ಞಾನಗಳು ಹೆಚ್ಚುತ್ತಿರುವುದರಿಂದ ಉದ್ಯೋಗದ ಅವಕಾಶ ಬೇಕಾದಷ್ಟಿದೆ, ಆದರೆ ಕಾಲೇಜಿನಲ್ಲಿ ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ತಮ್ಮ ಪ್ರತಿಭೆಗಳನ್ನು ಅನಾವರಣ ಮಾಡಬೇಕು. ಆರ್.ಪಿ.ಎ., ಅರ್ಟಿಫಿಶಲ್ ಇಂಟಲಿಜನ್ಸಿ, ಡಾಟಾ ಕಲೆಕ್ಷನ್ ಈ ರೀತಿಯ ಅನೇಕ ವಿಶೇಷ ಕೋರ್ಸ್‌ಗಳನ್ನು ಈಗಲೇ ಅರಿತ ಕೊಂಡರೆ ಉದ್ಯೋಗಳಿಗೆ ಅಲೆಯಬೇಕಾಗಿಲ್ಲ ಅದೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಉದ್ಯೋಗದ ಮೊದಲೇ ಕೌಶಲ್ಯಗಳನ್ನು ಬೆಳೆಸಿಕೊಂಡರೆ ಮುಂದೆ ಪರದಾಡುವ ಪರಿಸ್ಥಿತಿ ಎದುರಾಗುವುದಿಲ್ಲ ಎಂದರು.

ಕಾರ್‍ಯಕ್ರಮದ ಮುಖ್ಯ ಅತಿಥಿ ಪದವಿ ಕಾಲೇಜಿನ ಪ್ರಾಶುಂಪಾಲ ಡಾ. ಕುರಿಯನ್ ಮಾತನಾಡಿ, ಕಾರ್‍ಯಕ್ರಮವನ್ನು ಆಯೋಜಿಸುವುದು ಎಷ್ಟು ಮುಖ್ಯವೋ, ಕಾರ್‍ಯಕ್ರಮದಲ್ಲಿ ಭಾಗವಹಿಸಿ ಅದರಲ್ಲಿ ಸಿಗುವ ಮಾಹಿತಿಗಳು ಅದಕ್ಕಿಂತಲೂ ಮೌಲ್ಯವಾದದ್ದು. ಇದರ ಜತೆಗೆ ಮುಂದಿನ ದಿನಗಳಲ್ಲಿ ಉತ್ತಮಜೀವನ ಸಾಗಿಸಬೇಕಾದರೆ ಕಂಪ್ಯೂಟರ್ ಭಾಷೆ ತುಂಬಾ ಮುಖ್ಯವಾಗಿರುತ್ತದೆ. ವಿದ್ಯಾರ್ಥಿಗಳು ಕಲಿಕಾ ಜೀವನದಲ್ಲಿಯೇ ಕರಗತ ಮಾಡಿಕೊಳ್ಳಬೇಕು ಎಂದರು.

ಇಗ್‌ನಿಟ್ರಾ ೨ಕೆ೨೦ ಒಂದು ದಿನದ ಕಾಲೇಜು ಲೆವೆಲ್ ಫೆಸ್ಟ್ ಆಗಿದ್ದು, ಒಟ್ಟು ೭ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಐ.ಟಿ.ಕ್ವಿಜ್, ಫಝಲ್, ಕೋಡಿಂಗ್, ಐ.ಟಿ. ಮ್ಯಾನೇಜರ್, ಟ್ರೆಸರ್ ಹಂಟ್, ಗೇಮಿಂಗ್, ಛಾಯಚಿತ್ರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು

ಕಾರ್‍ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಕಾರ್‍ಯಕ್ರಮವನ್ನುಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ ವನಿತಾ ಪ್ರಭು ಸ್ವಾಗತಿಸಿ, ಉಪನ್ಯಾಸಕ ಶರತ್ ವಂದಿಸಿ, ಸ್ನೇಹ ನಿರೂಪಿಸಿದರು.