ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ ಅಸೀಮಾ ದೋಲಾ, ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ವತಿಯಿಂದ ಮಂಗಳೂರಿನಲ್ಲಿ ಆಯೋಜಿಸಲಾಗಿರುವ ನ್ಯಾಷನಲ್ ಯುತ್ ಕಾನ್ಫರೆನ್ಸ್ನಲ್ಲಿ ಪ್ರತಿನಿಧಿಯಾಗಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದಾರೆ.
ಜನವರಿ ೧೦ರಂದು ಮಂಗಳೂರಿನ ಲೋಯಲಾ ಹಾಲ್ನಲ್ಲಿ ಜರುಗಲಿರುವ ರಾಷ್ಟ್ರೀಯ ಯುವ ಸಮ್ಮೇಳನದಲ್ಲಿ ”ಸ್ಕಿಲಿಂಗ್ ದಿ ಯಂಗ್ ಇಂಡಿಯಾ” ಎಂಬ ವಸ್ತು ವಿಷಯದೊಂದಿಗೆ ಸದೃಢ ದೇಶ ನಿರ್ಮಾಣದಲ್ಲಿ ಯುವಜನತೆಯ ಯೋಚನೆ ಹಾಗೂ ಯೋಜನೆಗಳ ವಿನಿಮಯಕ್ಕೆ ಅವಕಾಶ ನೀಡಲಾಗಿದೆ. ಆನ್ಲೈನ್ ಹಾಗೂ ದೂರವಾಣಿ ಸಂದರ್ಶನದ ಮೂಲಕ ಇವರ ವಿಷಯ ಮಂಡನೆ, ವಾಕ್ಚಾತುರ್ಯ ಹಾಗೂ ನವನವೀನ ಯೋಚನೆಗಳ ಪರಿಣತಿಯನ್ನು ಪರೀಕ್ಷಿಸಿ ಸಮ್ಮೇಳನಕ್ಕೆ ಆಯ್ಕೆ ಮಾಡಲಾಗಿದೆ. ದೇಶದಾದ್ಯಂತ ೧೬೭ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಮುಂದಿನ ದಿನಗಳಲ್ಲಿ ಈ ಪ್ರತಿನಿಧಿಗಳಿಗೆ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ಸಕ್ರೀಯಾವಾಗಿ ಪಾಲ್ಗೊಳ್ಳುವ ಜವಾಬ್ದಾರಿಯನ್ನು ವಹಿಸಲಾಗಿದೆ.