ಅಲ್ಲು ಅರ್ಜುನ್ ವಿರುದ್ಧ ಕೇಸ್ ಮೇಲೆ ಕೇಸ್: ಈಗ ಮತ್ತೊಂದು ಕೇಸ್ ದಾಖಲು

ಪುಷ್ಪ 2 ಖ್ಯಾತಿ ಅಲ್ಲು ಅರ್ಜುನ್ ಇತ್ತೀಚೆಗೆ ಭಾರೀ ಸುದ್ದಿಯಲ್ಲಿರುವುದು ನಿಮಗೆಲ್ಲಾ ಗೊತ್ತೇ ಇದೆ. ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಸಿನಿಮಾ ಮೂಲಕ ಅಲ್ಲ, ಇನ್ನೊಂದು ಕೇಸ್ ಮೂಲಕ, ಹೌದು. ಪುಷ್ಪಾ 2 ಸಿನಿಮಾದಲ್ಲಿ, ಪೊಲೀಸರಿಗೆ ಅವಮಾನ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಅಲ್ಲು ಅರ್ಜುನ್ ವಿರುದ್ದ ದೂರು ನೀಡಿದ್ದಾರೆ. ಪುಷ್ಪ 2’ ಚಿತ್ರದಲ್ಲಿರುವ ರಕ್ತಚಂದನ ಕಳ್ಳಸಾಗಣೆ ಮಾಡುವ ಪುಷ್ಪರಾಜ್ ಹಾಗೂ ಪೊಲೀಸ್ ಅಧಿಕಾರಿ ಬನ್ವರ್ ಸಿಂಗ್ ಶೇಖಾವತ್ ನಡುವಿನ ಘರ್ಷಣೆ ಬಗ್ಗೆ. ಹಾಗು ಚಿತ್ರದಲ್ಲಿ ಬಳಸಿರುವ ಬಹುತೇಕ ದೃಶ್ಯಗಳಲ್ಲಿ ಪೊಲೀಸರಿಗೆ ಅವಮಾನ ಮಾಡಲಾಗಿದೆ ಎಂದು ದೂರು ನೀಡಿದ್ದು. ಈ ಕುರಿತು ಕೇಸ್ ದಾಖಲಾಗಿದೆ. ಈಗಾಗಲೇ ಸಿನಿಮಾದ ಜೊತೆಗೆ ಎರಡು ಮೂರು ಕೇಸ್ ಗಳಿಂದ ಸುದ್ದಿಯಲ್ಲಿರುವ ಅಲ್ಲು ಅರ್ಜುನ್ ಈಗ ಮತ್ತೊಂದು ಕೇಸ್ ಕಾರಣಕ್ಕೆ ಸುದ್ದಿಯಲ್ಲಿರುವುದು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.