ಉಡುಪಿ : ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಉಡುಪಿ ಜಿಲ್ಲೆ 275 ರ ಪ್ರಥಮ ಉಪ ಜಿಲ್ಲಾ ಗವರ್ನರ್ ರಾಗಿ ಉಳ್ಳಾಲ ಬರಿಕೆ ಗುತ್ತು ಸುನಿಲ್ ಕುಮಾರ್ ಶೆಟ್ಟಿ ಯವರು ಆಯ್ಕೆ ಯಾಗಿದ್ದಾರೆ.
ಕಂದಾಯ ಜಿಲ್ಲೆಗಳಾದ ಉಡುಪಿ, ಶಿವಮೊಗ್ಗ, ದಾವಣಗೆರೆ ಹಾಗೂ ಮಂಗಳೂರು ಜಿಲ್ಲೆಗಳು ಕಾರ್ಯವ್ಯಾಪ್ತಿಯಲ್ಲಿ ಬರುತ್ತವೆ.
ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಸರ್ಕಾರೇತರ ಸಂಸ್ಥೆ (NGO )ಯಾಗಿದ್ದು, 2008 ರಲ್ಲಿ ಭಾರತ ದಲ್ಲಿ ಪ್ರಾರಂಭ ವಾಗಿರುತ್ತದೆ. ಈ ಸಂಸ್ಥೆ ಯಾವುದೇ ಲಾಬೋದ್ಧೇಶಇಲ್ಲದ ಸ್ವತಂತ್ರವಾಗಿರುವ ಸಂಸ್ಥೆ ಯಾಗಿರುತ್ತದೆ. ಇದು ಸಮಾಜ ಸೇವೆ, ಮಾನವೀಯ ನೆರವು, ಪರಿಸರ ಸಂರಕ್ಷಣೆ, ಶಿಕ್ಷಣ ಮತ್ತು ಇತರ ಸಾಮಾಜಿಕ ಸಮಸ್ಯೆಗಳ ಮೇಲೆ ಕೆಲಸ ಮಾಡಿ ಸಮಾಜದ ಅಭಿವೃದ್ಧಿ ಮತ್ತು ಕಲ್ಯಾಣ ಕ್ಕಾಗಿ ದುಡಿಯುತ್ತಿದೆ.ಈ ಸಂಸ್ಥೆ ಪ್ರಸ್ತುತ ಪ್ರಪಂಚ ದ 22 ದೇಶಗಳಲ್ಲಿ ಕಾರ್ಯಾಚರಣೆ ಮಾಡುತ್ತಿದೆ.
ಈ ಸಂಸ್ಥೆಯು ಭಾರತ ದಲ್ಲಿ ಮತ್ತು ಪ್ರಪಂಚದಲ್ಲಿ ಅತೀ ವೇಗವಾಗಿ ಬೆಳೆಯುತ್ತಿದ್ದು, ಸಮಾಜದ ಸುಧಾರಣೆ ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ಅದರ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ.
ಈ ಸಂಸ್ಥೆಯ ಕಾರ್ಯವ್ಯಾಪ್ತಿಯು ಉಡುಪಿ ಮತ್ತು ಅಸುಪಾಸಿನ ಜಿಲ್ಲೆಗೆ ಕಾಲಿಟ್ಟಿದ್ದು, ಮುಂದಿನ ವರ್ಷ 2026-27 ರಲ್ಲಿ ಸುನಿಲ್ ಕುಮಾರ್ ಶೆಟ್ಟಿ ಯವರು ಜಿಲ್ಲಾ ಗವರ್ನರ್ ರಾಗಿ ಕಾರ್ಯನಿರ್ವಹಿಸಲಿದ್ದಾರೆ.












