ಮಣಿಪಾಲ: ರಾಜ್ಯಾದ್ಯಂತ ಕೋವಿಡ್ ಕರ್ಪ್ಯೂ ಜಾರಿಯಲ್ಲಿರುವುದರಿಂದ ಮತ್ತು ಸಾರ್ವಜನಿಕ ಸಾರಿಗೆಯ ಲಭ್ಯತೆಯ ಕೊರತೆಯ ಕಾರಣದಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಾಳೆ (ಏ.29)ಯಿಂದ ಜಾರಿಗೆ ಬರುವಂತೆ ಎಲ್ಲಾ ಹೊರರೋಗಿ ಸೇವೆಗಳು ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರ ವರೆಗೆ ಅರ್ಧ ದಿನ ಮಾತ್ರ ಕಾರ್ಯನಿರ್ವಹಿಸಲಿವೆ.
ಈ ಬದಲಾವಣೆಯು ಸರ್ಕಾರದ ಜನತಾ ಕರ್ಫ್ಯೂ ಆದೇಶ ಇರುವವರೆಗೆ ಮುಂದುವರಿಯುತ್ತದೆ. ಆದಾಗ್ಯೂ ತುರ್ತು ಸೇವೆಗಳು ಎಂದಿನಂತೆ ಎಲ್ಲಾ ದಿನಗಳಲ್ಲಿ 24*7 ಲಭ್ಯವಿರುತ್ತವೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ತಿಳಿಸಿದ್ದಾರೆ.