ಮಂಗಳೂರು: ಅನ್ಯಕೋಮಿನ ಮೂರು ಯುವಕರೊಂದಿಗೆ ಪಾರ್ಟಿ ಮಾಡಲು ಬಂದಿದ್ದ ಇಬ್ಬರು ಹಿಂದೂ ಯುವತಿಯರನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೊಪ್ಪಿಸಿದ ಘಟನೆ ಮಂಗಳೂರು ಎಕ್ಕಾರು ಸಮೀಪದ ಕಲ್ಲಿನ ಕೋರೆಯೊಂದರಲ್ಲಿ ನಡೆದಿದೆ.
ಯುವಕರು ಮಂಗಳೂರು ಮೂಲದವರಾಗಿದ್ದು, ಯುವತಿಯರು ಬೆಂಗಳೂರಿನವರೆಂದು ತಿಳಿದು ಬಂದಿದೆ. ಅನ್ಯಕೋಮಿನ ಯುವಕರ ಜೊತೆ ಯುವತಿಯರು ಇರುವ ವಿಚಾರ ಹಿಂದೂ ಸಂಘಟನೆ ಕಾರ್ಯಕರ್ತರ ಗಮನಕ್ಕೆ ಬಂದಿದೆ.
ಕೂಡಲೇ ಕಾರ್ಯಪ್ರವೃತ್ತರಾದ ಕಾರ್ಯಕರ್ತರು, ಘಟನಾಸ್ಥಳಕ್ಕೆ ತೆರಳಿ ಬಜ್ಪೆ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲಿಸರು ಐದು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.












