ಅಲೆವೂರು: ಉದ್ಯಮಿ ಹರೀಶ್ ಜಿ. ಶೆಟ್ಟಿ ನಿಧನ

ಅಲೆವೂರು: ಉದ್ಯಮಿ, ಸಮಾಜ ಸೇವಕ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಗುಡ್ಡೆಅಂಗಡಿ ಅಲೆವೂರು ಇದರ ಸ್ಥಾಪಕ ಸದಸ್ಯ ಹರೀಶ್ ಜಿ. ಶೆಟ್ಟಿ (52) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.

ಇವರು ಪತ್ನಿ ಅಲೆವೂರು ಗ್ರಾಮ ಪಂಚಾಯಿತಿ ಸದಸ್ಯೆ ಯಶೋಧ ಎಚ್. ಶೆಟ್ಟಿ, ಓರ್ವ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.