ಅಲೆವೂರು: ಸೆ. 10ರಿಂದ 37ನೇ ವರ್ಷದ ಗಣೇಶೋತ್ಸವ

ಅಲೆವೂರು: ಅಲೆವೂರು ಶ್ರೀಗಣೇಶ ಗುಡಿಯ ಗಣಪತಿ ದೇವರಿಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗುಡ್ಡೆಅಂಗಡಿ, ಅಲೆವೂರು ಇದರ ವತಿಯಿಂದ ₹ 10 ಲಕ್ಷ ಮೌಲ್ಯದ ಸ್ವರ್ಣಕವಚ ಸಮರ್ಪಣೆ ಕಾರ್ಯಕ್ರಮ ನಾಳೆ (ಸೆ.10) ಬೆಳಿಗ್ಗೆ 10.30ಕ್ಕೆ ನೆರವೇರಲಿದೆ.

37ನೇ ವರ್ಷದ ಗಣೇಶೋತ್ಸವವು ಸೆ. 10ರಿಂದ 13ರ ವರೆಗೆ ಅಲೆವೂರು ಶ್ರೀಗಣೇಶ ಗುಡಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಪ್ರಥಮ ದಿನದ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ವಿಗ್ರಹ ಪ್ರತಿಷ್ಠಾಪನೆ, ಅಂದಾಜು ₹ 10 ಲಕ್ಷ ರೂ.ಮೌಲ್ಯದ ನಿತ್ಯಪೂಜಿತ ಗಣಪನಿಗೆ ಸ್ವರ್ಣಕವಚ ಸಮರ್ಪಣೆ ಜರುಗಲಿದೆ.

ಪ್ರತಿ ದಿನ ಮಧ್ಯಾಹ್ನ 1 ಗಂಟೆಗೆ ಹಾಗೂ ಸಂಜೆ 7ಕ್ಕೆ ಮಹಾಪೂಜೆ ನಡೆಯಲಿದ್ದು, ಸಂಜೆ 5ರಿಂದ 7ರ ವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.