ಅಕ್ಷಯಾಮೃತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ: 5ನೇ ವಾರ್ಷಿಕ ಮಹಾಸಭೆ

ಹಿರಿಯಡಕ: ಅಕ್ಷಯಾಮೃತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 5ನೇ ವಾರ್ಷಿಕ ಮಹಾಸಭೆಯು ಸೆ.06 ರಂದು ಸುರಭಿ ಸಭಾಭವನ ಹಿರಿಯಡಕದಲ್ಲಿ ಅಪರಾಹ್ನ 4 ಗಂಟೆಗೆ ಸಂಘದ ಅಧ್ಯಕ್ಷರಾದ ಜನಾರ್ಧನ ಆರ್ ನಾಯಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸರ್ಕಾರಿ ಸೇವೆಗೈದು ಇತ್ತೀಚಿಗಷ್ಟೆ ನಿವೃತ್ತಿರಾದ ಐ.ಎ.ಎಸ್ ಅಧಿಕಾರಿ ಬಿ.ಸದಾಶಿವ ಪ್ರಭು ಎಳ್ಳಾರೆ, ಕೃಷಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆಗೈದ ವಾಸು ಪ್ರಭು ನರ್ಜೆಯವರನ್ನು, ಸಮಾಜ ಸೇವೆ ಮತ್ತು ಪತ್ರಿಕೋದ್ಯಮದಲ್ಲಿ ಕಾರ್ಯನಿವಹಿಸಿದ ಗೋಪಾಲಕೃಷ್ಣ ನಾಯಕ್ ರವರನ್ನು ಹಾಗು ಪ್ರಾಚೀನ ವಿದ್ಯೆ ಹಾಗು ಪಾರಂಪರಿಕ ವೈದ್ಯರಾಗಿರುವ ಬಿ. ಎನ್ ಪುಂಡಲೀಕರವರನ್ನು ಸನ್ಮಾನಿಸಲಾಯಿತು.

2025-26ರ ಸಾಲಿನ ಆಯವ್ಯಯ, ಆಸ್ತಿ ಜವಬ್ದಾರಿ ವಿವರ ಹಾಗೂ 2026-27ನೇ ಸಾಲಿನ ಮುಂಗಡ ಬಜೆಟ್ ಮಂಡಿಸಿದ ಸಿ ಇ ಓ ಶಶಿಕಾಂತ ಅವರು ಅಂಗೀಕಾರ ಪಡೆದರು. ಸಂಘದ ಒಟ್ಟು ವ್ಯವಹಾರ 20 ಕೋಟಿಯಷ್ಟು ಆಗಿದ್ದು, ನಿವ್ವಳ ಲಾಭ 5.21 ಲಕ್ಷದಷ್ಟು ಹಾಗೂ ಸದಸ್ಯರಿಗೆ 8% ಡಿವಿಡೆಂಡನ್ನು ಅಧ್ಯಕ್ಷರು ಘೋಷಿಸಿದರು.

ಉಪಾಧ್ಯಕ್ಷರಾದ ಶಾಂತರಾಮ್ ಸಾಲ್ವಂಕಾರ್, ನಿರ್ದೇಶಕರಾದ ಗಿರೀಶ್ ಪ್ರಭು, ಓಮೇಶ್ ನಾಯಕ್, ಆಶಾ ಕಾಮತ್, ಸಂಧ್ಯಾ ಕಾಮತ್, ವಾಸು ಪ್ರಭು, ವಿಜಯಲಕ್ಷ್ಮೀ ಉಪಸ್ಥಿತರಿದ್ದರು. ನಿರ್ದೇಶಕರಾದ ರವೀಂದ್ರ ಕುಮಾರ್ ನಿರೂಪಿಸಿ, ಸದಾನಂದ ನಾಯಕ್ ರವರು ಸ್ವಾಗತಿಸಿದರು.

ನಿರ್ದೇಶಕರಾದ ದಯಾನಂದ ನಾಯಕ್ ಪಿ, ರವರು ವಂದಿಸಿದರು. ಕಾರ್ಯಕ್ರಮದ ಅಂಗವಾಗಿ “ಪಂಚವಟಿ” ತಾಳಮದ್ದಳೆ ಜರುಗಿತು.